ಕೃಷಿ ಬೆಳೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಇಲ್ಲವಾದಲ್ಲಿ ರೈತರೆಲ್ಲರೂ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಗಣೇಶ ಇಳಿಗಾರ ಎಚ್ಚರಿಕೆ ನೀಡಿದರು.


ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಶಿವಾಜಿ ವೃತ್ತದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿದರು. ಅಕ್ರಮ ನೀರಾವರಿ ಪಂಪ್‌ಸೆಟ್ ಸಕ್ರಮಗೊಳಿಸಬೇಕು. ಅಧಿಕಾರಿಗಳು ಹಣ ಪಡೆಯುವುದನ್ನು ನಿಲ್ಲಿಸಬೇಕು. ರೈತರಿಗೆ ಎಲ್ಲ ಸೌಲಭ್ಯ ಉಚಿತವಾಗಿ ನೀಡಬೇಕು. ಹೆಸ್ಕಾಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಜನಪ್ರತಿನಿಧಿ ಗಳು ಇತ್ತ ಗಮನಹರಿಸಿ ರೈತ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಗೌರವಾಧ್ಯಕ್ಷ ದರೀಖಾನ್ ಅಜ್ಜವರು ಮಾತನಾಡಿ, ಲೈನ್‌ಮನ್‌ಗಳಿಂದ ರೈತರಿಗೆ ತೊಂದರೆಯಾಗುತ್ತಿದೆ.ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬೆದರಿಕೆ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ನೀರಾವರಿ ಪಂಪ್‌ಸೆಟ್ ಸಕ್ರಮಗೊಳಿಸಲು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಸದಲಗಾ ಹೆಸ್ಕಾಂ ಶಾಖೆ ಎಇಇ ಬಿ.ವಿ. ಪೂಜಾರಿ ಭೇಟಿ ನೀಡಿ ರೈತರ ಮನವಿ ಸ್ವೀಕರಿಸಿ ರೈತರ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ರೈತರ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮಹಿಳಾ ರಾಜ್ಯಾಧ್ಯಕ್ಷೆ ಸರೋಜಿನಿ ಅರ್ಗೆ, ಪಂಕಜ್ ತಿಪ್ಪಣ್ಣವರ, ತಾತ್ಯಾಸಾಹೇಬ ಬಸ್ಸಣ್ಣವರ, ರಮೇಶ ಪಾಟೀಲ, ರಮೇಶ್ ಮಾಲಗಾಂವೆ, ಗುರುನಾಥ ಹೆಗ್ಡೆ, ಸಂತೋಷ ಲೋಹಾರ, ಬಂಟಿ ಪಾಟೀಲ, ಸಂಜಯ ಪಾಟೀಲ, ಅಭಯ ಪಾಟೀಲ, ಮಹಾವೀರ್ ಲಾಡ್ಜ್, ರೇಷ್ಮಾ ಚಿನಗುಂಡಿ, ಪೋಪಟ ಪಾಟೀಲ, ಚಿದಾನಂದ್ ಮುತ್ನಾಳೆ ಸೇರಿದಂತೆ ವಿವಿಧಡೆಯ ರೈತರು ಉಪಸ್ಥಿತರಿದ್ದರು.
