Dharwad

ಧಾರವಾಡ ತಾಲೂಕಿನ ಅಮ್ಮಿನಬಾವಿಯಲ್ಲಿ ಜೆಸಿಬಿ ಗರ್ಜನೆ…ಅಕ್ರಮ ಮನೆಗಳು ತೆರವು.

Share

ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಅಕ್ರಮ ಮನೆಗಳ ವಿರುದ್ಧ ಪಂಚಾಯತಿ ಜೆಸಿಬಿ ಗರ್ಜಿಸಿತ್ತು. ಗ್ರಾಮದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ, ಶೆಡ್‌ಗಳನ್ನು ಗ್ರಾಮ ಪಂಚಾಯ್ತಿ ವತಿಯಿಂದ ನೆಲಸಮಗೊಳಿಸಲಾಗಿದೆ.

ವೈ- ಅಮ್ಮನಭಾವಿಯಲ್ಲಿ ಇತ್ತಿಚೆಗೆ ಸರ್ಕಾರಿ ಜಾಗದಲ್ಲಿ ಅನೇಕರು ಮನೆ ಹಾಗೂ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಈ ಹಿನ್ನೆಯಲ್ಲಿ‌ ಕಾರ್ಯ ಪಂಚಾಯತಿ ಸರ್ಕಾರಿ ಜಾಗ ಬಿಟ್ಟು ಮನೆಗಳನ್ನು ತೆರವುಗೊಳಿಸಿಕೊಳ್ಳುವಂತೆ ಮನೆ ಮಾಲೀಕರಿಗೆ ಪಂಚಾಯತಿ ಅಧಿಕಾರಿಯವರು‌ ಸೂಚನೆ ಕೊಟಿದ್ದರಂತೆ. ಸೂಚನೆ ಬಳಿಕವೂ ಮನೆ ಮಾಲೀಕರು ಅವುಗಳನ್ನು ತೆರವು ಮಾಡದ ಹಿನ್ನಲೆಯಲ್ಲಿ, ಹಾಗೂ ತಹಶೀಲ್ದಾರವರ ಸೂಚನೆ ಮೇರೆಗೆ ಜೆಸಿಬಿ ತಂದು ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಮನೆ ತೆರವು ಕಾರ್ಯಾಚರಣೆ ಆರಂಭಗೊಳ್ಳುತ್ತಿದ್ದಂತೆ ಪಂಚಾಯತಿ ಅಧಿಕಾರಿಗಳ ನಡೆ ವಿರುದ್ಧ ತಮ ಆಕ್ರೋಶ ವ್ಯಕ್ತಪಡಿಸಿದರು. ‌ ಮನೆಗಳ ತೆರವು‌ ಮಾಡುವ ಮುನ್ನ ನಮಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು‌ ಒತ್ತಾಯಿಸಿದರು.‌

Tags:

error: Content is protected !!