ಬೈಕ್ ಸವಾರನೋರ್ವ ಇಬ್ಬರು ಶಾಲಾ ಮಕ್ಕಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುವ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದ್ದು, ಶಾಲಾ ಶಿಕ್ಷಕರು ಸೇರಿ ವಿದ್ಯಾರ್ಥಿಗಳ ಪೋಷಕರು ಬೆಚ್ಚಿಬಿದಿದ್ದರು. ಆದರೆ ಬೈಕ್ ಅಪಘಾತ ಬಳಿಕ ಈಗ ಮಕ್ಕಳು ಪತ್ತೆಯಾಗಿದ್ದಾರೆ.

ಹೌದು ಧಾರವಾಡದ ಮುರುಘಾಮಠದ ಹತ್ತಿರದ ಲಕ್ಷ್ಮೀ ಹಾಗೂ ಮಾಳಾಪುರದ ತನ್ವೀರ್ ಎಂಬ ಮಕ್ಕಳನ್ನು ಬೈಕ್ ಸವಾರ ಪುಸಲಾಯಿಸಿ ತನ್ನ ಬೈಕ್ ಮೇಲೆ ಅಪಹರಿಸಿಕೊಂಡು ಹೋಗಿದ್ದಾನೆ. ಈ ಮಕ್ಕಳು ಕಮಲಾಪುರದ ಶಾಲೆಗಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬಿಟ್ಟ ಸಂದರ್ಭದಲ್ಲಿ ಇಬ್ಬರೂ ಮಕ್ಕಳು ಹೊರ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಆ ಇಬ್ಬರೂ ಮಕ್ಕಳನ್ನು ಪುಸಲಾಯಿಸಿ ತನ್ನ ಬೈಕ್ ಮೇಲೆ ಅಪಹರಿಸಿಕೊಂಡು ಪರಿಯಾಗಿದ್ದ. ಮಧ್ಯಾಹ್ನ ವಾಪಸ್ ಮಕ್ಕಳು ಶಾಲೆಗೆ ಬರದೇ ಹೋದಾಗ ಪಾಲಕರು ಅವರು ಮನೆಯವರಿಗೆ ತಿಳಿಸಿದ್ದಾರೆ. ಸಂಜೆ ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬರದೇ ಹೋದಾಗ ಎಲ್ಲರೂ ಗಾಬರಿಗೊಂಡಿದ್ದಾರೆ. ಸ್ಥಳೀಯರು ಅಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಬೈಕ್ ಸವಾರನೋರ್ವ ಇಬ್ಬರೂ ಮಕ್ಕಳನ್ನು ಅಪಹರಿಸಿಕೊಂಡು ಹೋಗಿರುವ ದೃಶ್ಯ ಸ್ಪಷ್ಟವಾಗಿ ಕಂಡು ಬಂದಿದೆ. ಬಳಿಕ ಶಾಲಾ ಆವರಣದಲ್ಲಿ ಮಕ್ಕಳ ಪಾಲಕರು ಮತ್ತು ಸಾರ್ವಜನಿಕರು ಜಮಾಯಿಸಿರು, ಘಟನೆ ಕುರಿತು ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಪರಿಚಿತ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದರು. ಆದರೆ ಸೋಮವಾರ ಕಿಡ್ನಾಪ್ ಆದ ಮಕ್ಕಳನ್ನು ಜೋಯಿಡಾ ಮಾರ್ಗವಾಗಿ ಕರೆದುಕೊಂಡು ಹೋಗುವಾಗ ಮಕ್ಕಳ ಅಪಹರಣಾಕ ಅಬ್ದುಲ್ ಕರೀಂ ಬೈಕ್ ಅಪಘಾತವಾಗಿದೆ. ಈ ವೇಳೆ ಅಪಹರಣಕಾರ ಹಾಗೂ ಮಕ್ಕಳಿಗೆ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಈ ಘಟನೆ ಕುರಿತು ಜೋಯಿಡಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೋಯಿಡಾ ಪೊಲೀಸರು ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ಮಾಡಿದಾಗ ಕಿಡ್ನಾಪ ಸಂಗತಿ ಬಯಲಿಗೆ ಬಂದಿದೆ. ತಡ ಮಾಡದ ಜೋಯಿಡಾ ಪೊಲೀಸರು ಮಕ್ಕಳು ಸೇರಿ ಅಬ್ದುಲ್ ಕರೀಂನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಚೇತರಿಸಿಕೊಳ್ಳುತ್ತಿದ್ದ ಅಪಹರಣಕಾರನನ್ನು ಜೋಯಿಡಾ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುವುದರ ಜತೆಗೆ ಮಕ್ಕಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕೂಡಲೇ ಧಾರವಾಡ ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈಗ ಸೋಮವಾರ ಕಿಡ್ನಾಪಾದ ಇಬ್ಬರು ಮಕ್ಕಳು ಜೀವಂತ ಪತ್ತೆಯಾಗಿದ್ದಾರೆ. ಪ್ರಸ್ತುತ ಪೊಲೀಸರು ವಶಕ್ಕೆ ಪಡೆದಿರುವ ಕಿಡ್ನಾಪರ ಅಬ್ದುಲ್ ಕರೀಂ ವಿಚಾರಣೆ ಬಳಿಕ ಕಿಡ್ನಾಪ್ ಹಿಂದಿನ ಅಸಲಿ ಸತ್ಯ ಬಯಲಿಗೆ ಬರಬೇಕಾಗಿದೆ.
