Dharwad

ಧಾರವಾಡ ಉಪನಗರ ಠಾಣೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ, ಇಬ್ಬರು ಬೈಕ್ ಕಳ್ಳರ ಬಂಧನ…

Share

ಬೈಕಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಚಾಲಾಕಿ ಬೈಕ್ ಕಳ್ಳರನ್ನು ಅಂದರ್ ಮಾಡುವಲ್ಲಿ ಧಾರವಾಡ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ವೈ- ಹುಬ್ಬಳ್ಳಿಯ ಹೂವಪ್ಪ ಊರ್ಫ್ ಕುಮಾರ ಆಸಂಗಿ ಹಾಗೂ ಪುಂಡಲೀಕ ನಾಗಣ್ಣವರ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ವಿವಿಧೆಡೆಗಳಲ್ಲಿ ಕಳ್ಳತನವಾಗಿದ್ದ ಅಂದಾಜು 3 ಲಕ್ಷ 65 ಸಾವಿರ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಇಬ್ಬರೂ ಆರೋಪಿಗಳು ಧಾರವಾಡ ಉಪನಗರ, ಹುಬ್ಬಳ್ಳಿ ಶಹರ ಠಾಣೆ ಹಾಗೂ ಹಾವೇರಿ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದರು. ಈ ಕಳ್ಳರ ಪತ್ತೆಗಾಗಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ವಿಶೇಷ ತಂಡವನ್ನು ರಚಿಸಿದ್ದರು. ಇದೀಗ ಆ ತಂಡ ಇಬ್ಬರು ಕಳ್ಳರನ್ನು ಪತ್ತೆ ಮಾಡಿ ಅವರಿಂದ 9 ಬೈಕ್‌ಗಳನ್ನು ವಶಪಡಿಸಿಕೊಂಡಿದೆ.

Tags:

error: Content is protected !!