ಅವರಿಬ್ಬರೂ ಶುಚಿಗಾರರು ಎಂದು ಗ್ರಂಥಾಲಯದಲ್ಲಿ ಕೆಲಸ ಮಾಡುವ ಮಹಿಳಾ ನೌಕರರು.ಮೂರು ವರ್ಷದ ಹಿಂದೆ ಇಬ್ಬರನ್ನು ಕೆಲಸದಿಂದ ತೆಗೆಯಲಾಗಿತ್ತು.ಅದರಲ್ಲಿ ಒಬ್ಬರನ್ನು ಮರಳಿ ಕೆಲಸಕ್ಕೆ ಸೇರಿಕೊಂಡರೆ,ಇನ್ನೊಬ್ಬಾಕೆಯನ್ನು ಸೇರಿಸಿಕೊಂಡಿಲ್ಲ.ಮೇಲಾಧಿಕಾರಿಗಳ ಕಿರುಕುಳ, ಕನಿಷ್ಠ ವೇತನಕ್ಕೆ ಅಡ್ಡಿ ಎಂದು ಇಬ್ಬರು ಈಗ ದಯಾ ಮರಣಕೋರಿ ಡಿಸಿ ಗೆ ಪತ್ರ ಬರೆದಿದ್ದಾರೆ.

ಕೈಯಲ್ಲಿ ದಯಾಮರಣ ಅರ್ಜಿ,ಮನದಲ್ಲಿ ತಮ್ಮ ಮೇಲಾದ ಅನ್ಯಾಯದ ನೋವು.ನ್ಯಾಯಕ್ಕಾಗಿ ಬಡ ಮಹಿಳಾ ನೌಕರರ ಹೋರಾಟ.ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರದ ಕೇಂದ್ರ ಗ್ರಂಥಾಲಯದ ಎದುರು.ಇವರ ಹೆಸರು ತಾಯವ್ವ ಕೊಣ್ಣೂರು ಹಾಗೂ ಸುವರ್ಣಾ .ಇಬ್ಬರು ಬಾಗಲಕೋಟೆ ಕೇಂದ್ರ ಗ್ರಂಥಾಲಯದಲ್ಲಿ ವೋಚರ್ ಬೇಸ್ ಆಧಾರಿ ದಿನಗೂಲಿ ಶುಚಿಗಾರರು ಎಂದು ಕೆಲಸ ಮಾಡ್ತಿದ್ದವರು.ತಾಯವ್ವ ೨೨ ವರ್ಷದಿಂದ ಕೆಲಸ ಮಾಡ್ತಿದ್ದರೆ,ಸುವರ್ಣಾ ೧೨ ವರ್ಷದಿಂದ ಕೆಲಸ ಮಾಡ್ತಿದ್ದರು.ಇವರಿಗೆ ಕನಿಷ್ಟವೇತನ ನೀಡದೆ ಅನ್ಯಾಯ ಮಾಡಲಾಗಿದೆಯಂತೆ.ಅದನ್ನು ಪ್ರಶ್ನೆ ಮಾಡಿದಕ್ಕೆ ಮೂರು ವರ್ಷದ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು.ಅದರಲ್ಲೂ ತಾಯವ್ವ ಅವರು ಹಿಂದಿನ ಗ್ರಂಥಪಾಲಕ ಮಲ್ಲಪ್ಪ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ ಎಂದು ದೂರು ನೀಡಿದ ರೀತಿ ಬಿಂಬಿಸಿ ಅವಮಾನಿಸಲಾಗಿದೆಯಂತೆ.ನಾನು ಲೈಂಗಿಕ ಕಿರುಕುಕಲ ಆರೋಪ ಮಾಡಿರಲೇ ಇಲ್ಲ.ಇದರಿಂದ ನನ್ನ ಮಾನ ಹಾನಿಯಾಗಿದೆ,ಗ್ರಂಥಾಲಯ ಕ್ಲರ್ಕ್ ಚಂದ್ರಶೇಕರ್ ಪ್ಯಾಟಿ ಇಂತಹ ಕೃತ್ಯ ಎಸಗಿದ್ದು ಆತನ ಮೇಲೆ ಹಾಗೂ ಗ್ರಂಥಪಾಲಕಿ ಹಾಜಿರಾ ನಸ್ರೀನ್ ವಿರುದ್ಧ ಕ್ರಮ ಆಗಬೇಕು.ಇಲ್ಲದಿದ್ದರೆ ನಮಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ದಯಾಮರಣ ಕೋರುವ ಮೂಲಕ ಹೋರಾಟ ನಡೆಸಿದ್ದಾರೆ.
.
ಇನ್ನು ಸುವರ್ಣಾ ಎಂಬ ಮಹಿಳೆ ಕಳೆದ ಹನ್ನೆರಡು ವರ್ಷದಿಂದ ಶುಚಿಗಾರರು ಎಂದು ಕೆಲಸ ಮಾಡುತ್ತಿದ್ದರು.ಆದರೆ ಮೂರು ವರ್ಷದ ಹಿಂದೆ ಅನಾರೋಗ್ಯ ಹಿನ್ನೆಲೆ ಎರಡು ತಿಂಗಳು ಕೆಲಸಕ್ಕೆ ಹಾಜರಾಗಿರಲಿಲ್ಲ.ರಜೆ ಬಗ್ಗೆ ಮೇಲಾಧಿಕಾರಿಗಳಿಗೆ ಹೇಳಿಯೇ ಹೋಗಿದ್ದರಂತೆ.ಎರಡು ತಿಂಗಳ ಬಳಿಕ ವಾಪಸ್ ಬಂದರೆ ಕೆಲಸಕ್ಕೆ ಸೇರಿಸಿಕೊಂಡಿಲ್ಲ.ನನ್ನ ಗಂಡ ಬೇರೆ ಮದುವೆಯಾಗಿದ್ದಾನೆ ,ನನಗೆ ಮಕ್ಕಳು ಬೇರೆ ಇಲ್ಲ .ಕೆಲಸವಿಲ್ಲದೆ ಸಾಲ ಮಾಡಿಕೊಂಡಿದ್ದೇನೆ ನನಗೆ ಕೆಲಸ ಅನಿವಾರ್ಯ ಆದ್ದರಿಂದ ನನ್ನನ್ನು ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳಿ ಇಲ್ಲದಿದ್ದರೆ ಸಾಯೋಕೆ ಅನುಮತಿ ಕೊಡಿ ಅಂತಿದ್ದಾರೆ.ಈ ಬಗ್ಗೆ ಮಾತಾಡಿದ ಬಾಗಲಕೋಟೆ ಡಿಸಿ ಅವರು ದಿನಗೂಲಿ ಮಹಿಳಾ ನೌಕರರಾದ ತಾಯವ್ವ ದಯಾಮರಣ ಕೋರಿ ಅರ್ಜಿ ಬರೆದಿದ್ದಾರೆ.ಈ ಬಗ್ಗೆ ವಿಚಾರಣೆ ಮಾಡುತ್ತೇವೆ ಈ ಸಂಬಂಧ ಉಪವಿಭಾಗಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಿದ್ದೇನೆ.ತನಿಖೆ ನಂತರ ವರದಿ ತರಿಸಿಕೊಳ್ಳುತ್ತೇನೆ.
ಬಳಿಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
)ಒಟ್ಟಿನಲ್ಲಿ ಮೇಲಾಧಿಕಾರಿಗಳ ಹಾಗೂ ಡಿ ದರ್ಜೆ ಮಾದರಿ ನೌಕರರ ಜಿದ್ದು ಕಳೆದ ಮೂರು ವರ್ಷದಿಂದ ನಡೆಯುತ್ತಿದೆ.ಇದೀಗ ಅದು ದಯಾಮರಣ ಹಂತಕ್ಕೆ ಬಂದಿದ್ದು,ಡಿಸಿ ಅವರು ಯಾವ ನಿರ್ಧಾರ ಕೈಗೊಳ್ತಾರೊ ನೋಡಬೇಕು
