Belagavi

ಫೆಬ್ರವರಿ 1ರಿಂದ ಕಂಪ್ಯೂಟರ್ ಪರೀಕ್ಷೆ ಆರಂಭ: ಬೆಳಗಾವಿಯ ಸುನೀತಾ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳಿಗೆ ಆರ್‌ಎನ್ ಶೆಟ್ಟಿ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ

Share

ಕರ್ನಾಟಕ ಸರ್ಕಾರದ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಫೆಬ್ರವರಿ-2026ರ ಗಣಕಯಂತ್ರ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬೆಳಗಾವಿಯ ಸುನೀತಾ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಕಂಪ್ಯೂಟರ್ಸ್ ವಿದ್ಯಾರ್ಥಿಗಳಿಗೆ ಆರ್‌ಎನ್ ಶೆಟ್ಟಿ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಿದ್ಯಾಲಯದಲ್ಲಿ ಹಾಲ್‌ಟಿಕೆಟ್ ಪಡೆದುಕೊಳ್ಳುವಂತೆ ಪ್ರಾಚಾರ್ಯರು ಸೂಚಿಸಿದ್ದಾರೆ.

ಕರ್ನಾಟಕ ಸರ್ಕಾರದ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ರಾಜ್ಯ ನಿರ್ದೇಶಕರು ಹೊರಡಿಸಿರುವ ಆದೇಶದಂತೆ, 2026ರ ಫೆಬ್ರವರಿ ತಿಂಗಳ ಗಣಕಯಂತ್ರ ಪರೀಕ್ಷೆಗಳು ದಿನಾಂಕ 01-02-2026 ರಿಂದ 05-02-2026 ರವರೆಗೆ ನಡೆಯಲಿವೆ. ಬೆಳಗಾವಿಯ ಖಡೇ ಬಜಾರ್‌ನಲ್ಲಿರುವ ಸುನೀತಾ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಕಂಪ್ಯೂಟರ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ಎದುರಿಸಲಿದ್ದು, ಮಂಡಳಿಯ ವೇಳಾಪಟ್ಟಿಯಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಾಲ್‌ಟಿಕೆಟ್‌ಗಳನ್ನು ಸುನೀತಾ ಇನ್‌ಸ್ಟಿಟ್ಯೂಟ್‌ನ ಕಾರ್ಯಾಲಯದಲ್ಲಿ ಪಡೆದುಕೊಳ್ಳಬೇಕು. ಬೆಳಗಾವಿಯ ಆರ್‌ಎನ್ ಶೆಟ್ಟಿ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದು, ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳು ಹಾಜರಾಗುವಂತೆ ಪ್ರಾಚಾರ್ಯರು ತಿಳಿಸಿದ್ದಾರೆ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಯಶಸ್ಸು ಕೋರಿ ಶುಭ ಹಾರೈಸಿದ್ದಾರೆ

Tags:

error: Content is protected !!