ಉತ್ತಮ ಆರೋಗ್ಯವಂತರಾಗಿರಲು ಸ್ವಚ್ಚತೆ ಅವಶ್ಯಕ ಎಂದು ಹುಕ್ಕೇರಿ ಸಿವಿಲ್ ಹಿರಿಯ ನ್ಯಾಯಾಧೀಶ ರಾಜಣ್ಣಾ ಸಂಕಣ್ಣವರ ಹೇಳಿದರು.


ರಾಷ್ಟ್ರೀಯ ಸ್ವಚ್ಚತಾ ದಿನ ಅಂಗವಾಗಿ ನ್ಯಾಯಾಲಯ ಆವರಣವನ್ನು ಪುರಸಭೆ ಹುಕ್ಕೇರಿ, ನ್ಯಾಯವಾದಿಗಳ ಸಂಘ ಮತ್ತು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶರಾದ ರಾಜಣ್ಣಾ ಸಂಕಣ್ಣವರ ಮತ್ತು ಆದಿತ್ಯ ಕಲಾಲ ಚಾಲನೆ ನೀಡಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಾಷ್ಟ್ರೀಯ ಸ್ವಚ್ಚತಾ ದಿನ ಅಂಗವಾಗಿ ಇಂದು ವಿವಿಧ ಇಲಾಖೆಗಳ ಸಹಯೋಗದಿಂದ ನ್ಯಾಯಾಲಯ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ಪರಿಸರ ಸ್ವಚ್ಚತೆಯೊಂದಿಗೆ ಪುರಸಭೆಯ ನಿಯಮಾವಳಿ ಪ್ರಕಾರ ಹಸಿ ಮತ್ತು ಒಣ ಕಸ ಬೇರ್ಪಡಿಸಿ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ನೀಡಿ ಮನೆ ಮತ್ತು ಮನ ಸ್ವಚ್ಚತೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದರು..
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಆರೋಗ್ಯ ಅಧಿಕಾರಿ ಸಂತೋಷ ಹೋಳೆನ್ನವರ, ಪರಿಸರ ಅಭಿಯಂತರ ಶ್ರೀಮತಿ ರೇವತಿ ಆರ್, ದಫೆದಾರ ಎ ಜೆ ಮೊಕಾಶಿ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ, ಎಸ್ ಜೆ ನದಾಫ್, ಬಸವರಾಜ ಹುಂಡೆಕಾರ, ಉಮೇಶ ಪಾಟೀಲ, ಪ್ರಕಾಶ ಪಾಟೀಲ, ವಿಠ್ಠಲ ಗಸ್ತಿ ,ಆಶಾ ಸಿಂಗಾಡೆ, ಅನಿತಾ ಕುಲಕರ್ಣಿ, ಬಿ ಬಿ ಬಾಗಿ, ಎ ಸಿ ಕರೋಶಿ, ಸಿ ಎಂ ಸಂಸುದ್ದಿ ಮೊದಲಾದವರು ಉಪಸ್ಥಿತರಿದ್ದರು.
