Bagalkote

ಅದ್ದೂರಿ ಚಾಲುಕ್ಯ ಉತ್ಸವ ಆಚರಣೆಗೆ ಕರೆ ಚಾಲುಕ್ಯ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ 16 ರಿಂದ ಜಿಲ್ಲೆಯಾದ್ಯಂತ ಚಾಲುಕ್ಯ ರಥಯಾತ್ರೆ ಸಂಚಾರ _ಸಚಿವ ತಿಮ್ಮಾಪೂರ

Share

ಐತಿಹಾಸಿಕ ಬಾದಾಮಿ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿಯಾಗಿ ಚಾಲನೆ ನೀಡಲಿದ್ದು, ಉತ್ಸವದ ಅಂಗವಾಗಿ ಜನವರಿ 16 ರಿಂದ ಚಾಲುಕ್ಯ ರಥಯಾತ್ರೆ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಹೇಳಿದರು. ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡಸಿ ಮಾತನಾಡಿದ ಅವ್ರು,ಚಾಲುಕ್ಯರ ಗತವೈಭವ ಸ್ಮರಿಸುವ ನಿಟ್ಟಿನಲ್ಲಿ ಜನವರಿ 19 ,20, 21 ವರೆಗೆ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಜರುಗಲಿರುವ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.ಉತ್ಸವ ಸಿದ್ದತೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದ ಸಚಿವ ತಿಮ್ಮಾಪೂರ, ನಿಗದಿತ‌ ಸಮಯದಲ್ಲಿ ಸಕಲ ಸಿದ್ದತೆಯನ್ನ ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಸೂಚಿಸಿದರು.ಸಭೆಯಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ‌ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದು, ಇದೇ ತಿಂಗಳು 19 ರಂದು ಚಾಲುಕ್ಯ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ

Tags:

error: Content is protected !!