ಶೇಡಬಾಳದ ಹಿರಿಯ ಸಮಾಜಸೇವಕಿ ಶತಾಯುಷಿ ಧೋಂಡುಬಾಯಿ ಚಂದು ಖಾಂಡೆ (೯೭) ಬುಧವಾರದಂದು ನಿಧನರಾದರು.

ಮೃತರು ಶೇಡಬಾಳ ಪಿಕೆಪಿಎಸ್ ಸಂಸ್ಥೆ ಉಪಾಧ್ಯಕ್ಷರು ಹಾಗೂ ಉಗಾರದ ಶ್ರೀಹರಿ ಪಿ.ಯು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಅಣ್ಣಾಸಾಹೇಬ್ ಖಾಂಡೆ ಅವರ ಮಾತೋಶ್ರಿಯವರಾಗಿದ್ದರು. ಮೃತರು ಇಬ್ಬರು ಪುತ್ರರು, ಮೂರು ಪುತ್ರಿಯರು, ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
