hubbali

ಕ್ಷುಲಕ ವಿಚಾರಕ್ಕೆ ತಮ್ಮನಿಂದಲೇ ಅಣ್ಣನಿಗೆ ಚಾಕು ಇರಿತ, ಸ್ಥಿತಿ ಗಂಭೀರ..!!

Share

ಹಳೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ತಮ್ಮನೊಬ್ಬ ತನ್ನ ಅಣ್ಣನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಮಲ್ಲೇಶ್ ಪೂಜಾರ (42) ಎಂದು ಗುರುತಿಸಲಾಗಿದೆ. ಹಳೆಯ ವೈಷಮ್ಯ ಹಿನ್ನೆಲೆ ಈ ದಾಳಿಗೆ ಕಾರಣ ಎನ್ನಲಾಗಿದ್ದು, ಮದ್ಯಪಾನ ಮಾಡಿ ಮನೆಯ ಎದುರು ಕುಳಿತಿದ್ದ ವೇಳೆ ಸಹೋದರ ಪ್ರದೀಪ್ ಏಕಾಏಕಿ ಬಂದು ಜಗಳಕ್ಕೆ ಇಳಿದು, ಚಾಕುವಿನಿಂದ ಏಳು ಬಾರಿ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಮಲ್ಲೇಶ್ ಪೂಜಾರ ನನ್ನು ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Tags:

error: Content is protected !!