ಅರಣ್ಯ ಸಂಪತ್ತಿನ ಮಡಿಲಲ್ಲಿರುವ ಖಾನಾಪುರ ತಾಲೂಕಿನ ಪ್ರಕೃತಿ ಸೌಂದರ್ಯವೇ ಅನ್ಯನ್ಯ. ಇದೀಗ ಖಾನಾಪುರದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಪ್ರವಾಸಿಗರೊಬ್ಬರಿಗೆ ಕಾಡು ಪ್ರಾಣಿಗಳ ಅಪರೂಪದ ದರ್ಶನವಾಗಿದೆ. ಹೆಮ್ಮಡಗಾ ರಸ್ತೆಯ ದಟ್ಟ ಅರಣ್ಯದ ಮಧ್ಯೆ ಕಾಡು ಎಮ್ಮೆಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಈಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಖಾನಾಪುರ ನಿವಾಸಿ ಮೋಜಮ್ಮಿಲ್ ಖಾಜಿ ಅವರು ಗೋವಾ ಪ್ರವಾಸದಲ್ಲಿದ್ದಾಗ ಹೆಮ್ಮಡಗಾ ರಸ್ತೆಯಲ್ಲಿ ಈ ಅಚ್ಚರಿಯ ದೃಶ್ಯ ಕಂಡುಬಂದಿದೆ. ದಟ್ಟವಾದ ಅರಣ್ಯದ ಮಧ್ಯೆ ರಸ್ತೆ ದಾಟುತ್ತಿದ್ದ ಹಾಗೂ ಪರಿಸರದಲ್ಲಿ ವಿಹರಿಸುತ್ತಿದ್ದ ಕಾಡು ಎಮ್ಮೆಗಳ ಹಿಂಡನ್ನು ಕಂಡ ಮುಜಮ್ಮಿಲ್, ತಕ್ಷಣವೇ ತಮ್ಮ ಮೊಬೈಲ್ ಫೋನ್ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಪ್ರಕೃತಿಯ ಶಾಂತ ವಾತಾವರಣದಲ್ಲಿ ಕಾಡು ಪ್ರಾಣಿಗಳು ಸ್ವೇಚ್ಛೆಯಾಗಿ ಓಡಾಡುವ ಈ ನೋಟ ನೋಡುಗರ ಕಣ್ಮನ ಸೆಳೆಯುವಂತಿದೆ.
ಖಾನಾಪುರ ತಾಲೂಕು ತನ್ನ ವಿಸ್ತಾರವಾದ ಅರಣ್ಯ ಪ್ರದೇಶಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಪರಿಸರಮಯ ವಾತಾವರಣ ವನ್ಯಜೀವಿಗಳ ಪಾಲಿನ ಸ್ವರ್ಗವಾಗಿದೆ. ಪ್ರವಾಸಿಗರು ಸೆರೆಹಿಡಿದ ಈ ವಿಡಿಯೋವನ್ನು ನಮ್ಮ ‘ಇನ್ ನ್ಯೂಸ್’ ವೀಕ್ಷಕರಿಗಾಗಿ ವಿಶೇಷವಾಗಿ ಹಂಚಿಕೊಳ್ಳಲಾಗಿದ್ದು, ಅರಣ್ಯದ ಸೌಂದರ್ಯ ಮತ್ತು ವನ್ಯಜೀವಿಗಳ ರಕ್ಷಣೆಯ ಮಹತ್ವವನ್ನು ಇದು ಸಾರುತ್ತಿದೆ. ಪ್ರತ್ಯಕ್ಷವಾಗಿ ಇಂತಹ ದೃಶ್ಯಗಳನ್ನು ನೋಡುವುದು ಒಂದು ಅಪರೂಪದ ಅನುಭವ ಎಂದು ಪ್ರವಾಸಿಗರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
