ಅತಿ ವೇಗವಾಗಿ ಬೈಕ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಬೈಕ್ ಚಾಲಕರು ಸ್ಥಳದಲ್ಲಿಯೇ ಕೊನೆಯುಸಿರುಳೆದಿರುವ ಘಟನೆ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ರಾಯಾಪುರದ ಇಂಡಿಯನ್ ಆಯಲ್ ಕಾರ್ಪೊರೇಷನ್ ಬಳಿ ಮಧ್ಯ ರಾತ್ರಿ ಸಂಭವಿಸಿದೆ.


ವಿಜಯಪುರದ ಪ್ರಜ್ವಲ್ (25), ಹುಬ್ಬಳ್ಳಿಯ ಶಂಕರ್ (26) ಮೃತ ಬೈಕ್ ಸವಾರರೆಂದು ಗುರುತಿಸಲಾಗಿದೆ. ಬೈಕ ಸವಾರಿಬ್ಬರು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ KTM ಬೈಕ್’ನ್ನು ಅತಿ ಜೋರಾಗಿ ಓಡಿಸಿಕೊಂಡ ಬರುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಪಘಾತದ ಸ್ಥಳಕ್ಕೆ, ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಮೃತಪಟ್ಟ ಬೈಕ್ ಸವಾರರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
