Bagalkote

ಕೂಡಲಸಂಗಮದಲ್ಲಿ ಶರಣ ಮೇಳದ ಸಂಭ್ರಮ: ಗಾಯಕಿ ಸಂಗೀತ ಕಟ್ಟಿಗೆ ‘ಬಸವಾತ್ಮಜೆ’ ಪ್ರಶಸ್ತಿ ಪ್ರದಾನ

Share

• ಕೂಡಲಸಂಗಮದಲ್ಲಿ 39ನೇ ಶರಣ ಮೇಳ ಸಂಭ್ರಮ
• ಸಚಿವ ಎಂ.ಬಿ. ಪಾಟೀಲ್ ಗೋಷ್ಠಿ ಉದ್ಘಾಟನೆ
• ಗಾಯಕಿ ಸಂಗೀತ ಕಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ
• ನೌಕರರ ಸಂಘದ ಷಡಕ್ಷರಿಗೆ ಕಾಯಕ ರತ್ನ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಕೂಡಲಸಂಗಮದಲ್ಲಿ 39ನೇ ಶರಣ ಮೇಳವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಕ್ತಿ ಮತ್ತು ವೈಚಾರಿಕತೆಯ ಸಂಗಮದೊಂದಿಗೆ ಸಂಭ್ರಮದಿಂದ ಜರುಗುತ್ತಿದೆ.
ಇಂದಿನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ್ ಶಿಂದೆ, ಸಚಿವರಾದ ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪೂರ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಎರಡನೇ ದಿನದ ಸಮಾವೇಶ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಸಚಿವ ತಿಮ್ಮಾಪೂರ ಅವರು ಲಿಂಗಾಯತ ಧರ್ಮ ಧ್ವಜಾರೋಹಣ ನೆರವೇರಿಸಸಿದರು.
ಇಂದಿನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಲಿಂಗಾಯತ ಧರ್ಮದ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರ ಸ್ಮರಣಾರ್ಥ ನೀಡಲಾಗುವ ‘ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿ’ ಯನ್ನು ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಪುರಸ್ಕಾರವನ್ನು ಒಳಗೊಂಡಿದೆ. ಇದೇ ವೇಳೆ ಸಚಿವ ಎಂ.ಬಿ. ಪಾಟೀಲ್ ಅವರು ಮಾತೆ ಮಹಾದೇವಿ ರಚಿತ ‘ತರಂಗಿಣಿ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ‘ರಾಜ್ಯ ಮಟ್ಟದ ಶರಣ ಕಾಯಕ ರತ್ನ’ ಪ್ರಶಸ್ತಿ ಹಾಗೂ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ರವಿ ಮೂಕಿ ಅವರಿಗೆ ‘ಜ್ಞಾನ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮೇಳದಲ್ಲಿ ಹತ್ತಾರು ಸಾವಿರ ಭಕ್ತರು ಪಾಲ್ಗೊಂಡಿದ್ದರು.

Tags:

error: Content is protected !!