State

ಪರಿಷತ್‌ನಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ ಕಿಡಿ: ಕಲಾಪ ಮುಂದೂಡಿಕೆ…

Share

ವಿಧಾನ ಪರಿಷತ್ ಕಲಾಪ ಇಂದು ರಾಜ್ಯಪಾಲರ ಭಾಷಣದ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಯಿತು. ಬಿ.ಕೆ. ಹರಿಪ್ರಸಾದ್ ಹೇಳಿಕೆ ಖಂಡಿಸಿ ಹಾಗೂ ವಿಷಾದ ವ್ಯಕ್ತಪಡಿಸದ ಸರ್ಕಾರದ ನಡೆಯನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾರಣ, ಸಭಾಪತಿಗಳು ಕಲಾಪವನ್ನು ಕೆಲಕಾಲ ಮುಂದೂಡಿದರು.”

ಇಂದು ವಿಧಾನ ಪರಿಷತ್ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಗೆ ಅಣಿಯಾದರು. ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ದಯವಿಟ್ಟು ಎಲ್ಲ ಸದಸ್ಯರು ತಮ್ಮ ತಮ್ಮ ತಮ್ಮ ಸ್ಥಾನಕ್ಕೆ ತೆರಳಬೇಕೆಂದರು. ಇದಕ್ಕೆ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರ ಭಾಷಣಕ್ಕೆ ಖಂಡನೆ ಎಂಬ ಶಬ್ದವನ್ನು ಹಿಂಪಡೆಯಲಾಗಿದೆ ಆದರೇ, ಅದಕ್ಕೆ ವಿಷಾದವನ್ನು ವ್ಯಕ್ತಪಡಿಸಿಲ್ಲ ಎಂದರು. ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ರಾಜ್ಯಪಾಲರ ವಂದನಾ ನಿರ್ಣಯವನ್ನು ಸ್ವಾಗತಿಸುತ್ತೇವೆಂದು ಸೂಚಿಸಿದರು. ಈ ಹಿನ್ನೆಲೆ ಸಭಾಪತಿಗಳು ಈ ವಿಷಯವಾಗಿ ವಿಪಕ್ಷ ಸದಸ್ಯರು ಮತ್ತೇ ಮಾತನಾಡದಂತೆ ಹೇಳಿದರು.

ವಿಪಕ್ಷ ಸದಸ್ಯ ಸಿ.ಟಿ. ರವಿ ಅವರು ವಿಷಾದ ವ್ಯಕ್ತಪಡಿಸಲಿಲ್ಲ ಎಂದರು. ಅಲ್ಲದೇ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ ಅವರು ಕೂಡ ಧ್ವನಿಗೂಡಿಸಿದರು. ಸಭಾಪತಿ ಸಣ್ಣ ಸಣ್ಣ ವಿಷಯಗಳನ್ನು ಎತ್ತಿ ಸದನದ ಸಮಯವನ್ನು ಹಾಳಾ ಮಾಡಬೇಡಿ. ಸದನವನ್ನು ನಡೆಸಬೇಕೋ ಬೇಡವೋ ಎಂದು ಕೇಳಿದರು. ವಿಪಕ್ಷ ಸದಸ್ಯರು ಸದನದ ಕಾರ್ಯಕಲಾಪದ ಪುಸ್ತಕವನ್ನು ಹರಿದು ಹಾಕಿದ್ದು ಅಪಮಾನವಲ್ಲವೇ ಆಡಳಿತ ಪಕ್ಷದ ಸದಸ್ಯರು ಹೇಳಿದರು.

ಮತ್ತೇ ಆರೋಪ ಪ್ರತ್ಯಾರೋಪಗಳು ಆರಂಭಗೊಂಡು ಬಿ.ಕೆ ಹರಿಪ್ರಸಾದ ಹೇಳಿಕೆ ಖಂಡಿಸಿ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆಗಿಳಿದು, ಹರಿಪ್ರಸಾದ ವಜಾಕ್ಕೆ ಆಗ್ರಹಿಸಿದರು. ಸದ್ದು ಗದ್ದಲದ ಹಿನ್ನೆಲೆ ಸದನದ ಕಲಾಪವನ್ನು ಸಭಾಪತಿಗಳು ಕೆಲ ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು.

Tags:

error: Content is protected !!