ಶಾಸಕ ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಸವದಿ ಡಿಸಿಸಿ ಬ್ಯಾಂಕಿನ ನೌಕರ ಒಕ್ಕೂಟದ ಮೇಲೆ ಹಲ್ಲೆ ನಡೆಸಿದ್ದಾರೆಂದು ಡಿಸಿಸಿ ಬ್ಯಾಂಕ್ ನೌಕರರು ಒಂದೆಡೇ ಪ್ರತಿಭಟನೆ ನಡೆಸಿದರೇ, ಇನ್ನೊಂದೆಡೇ ಅಥಣಿಯಲ್ಲಿ ಸವದಿ ಬೆಂಬಲಿಗರು ಲಕ್ಷ್ಮಣ ಸವದಿ ಅವರ ಬೆಂಬಲದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಶಾಸಕ ಲಕ್ಷ್ಮಣ ಸವದಿ ಅವರ ಮೇಲೆ ಸುಳ್ಳು ಆರೋಪ ಹೋರಿಸಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿ ಶಾಸಕ ಲಕ್ಷ್ಮಣ್ ಸವದಿ ಬೆಂಬಲಿಗರು ಟೈರ್’ಗೆ ಬೆಂಕಿಯಿಟ್ಟು, ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಲಕ್ಷ್ಮಣ ಸವದಿ ಅವರು ದೂರವಾಣಿ ಮೂಲಕ ಕಾರ್ಯಕರ್ತರು ತಮ್ಮ ಬೆಂಬಲಕ್ಕೆ ನಿಂತ ಹಿನ್ನಲೆ ಭಾವುಕರಾಗಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ತಮ್ಮ ಪರವಾಗಿ ತಮ್ಮ ಧ್ವನಿಯಾಗಿ ಕಾರ್ಯಕರ್ತರು ನಿಂತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಿ ಬೆಂಬಲ ಸೂಚಿಸಿದ್ದೀರಿ. ಯಾವತ್ತೂ ಸತ್ಯಕ್ಕೆ ಜಯವಾಗಲಿದೆ ಎಂದರು.
ಅಭಿಮಾನಿಗಳೊಂದಿಗೆ ತಮ್ಮ ವಿರುದ್ಧದ ಆರೋಪಗಳನ್ನು ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಚಿದಾನಂದ ಸವದಿ ಅವರು, ಈ ಘಟನೆಯ ಹಿಂದೆ ಯಾರಿದ್ದಾರೆ, ಅವರಿಗೆ ಪ್ರಚೋದನೆ ಯಾರು ನೀಡಿದ್ದಾರೆ ಎಂಬುವುದನ್ನು ಅಧಿಕಾರಿಗಳು ತನಿಖೆ ನಡೆಸಬೇಕು. ಅಧಿಕಾರಿಗಳು ಯಾರದೇ ಒತ್ತಡಕ್ಕೆ ಮಣಿಯದೆ ಪಾರದರ್ಶಕ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ನಿಂಗರಾಜ ಕರೆಣ್ಣವರ ಮೇಲೆ ಹಲ್ಲೆ ನಡೆಸಿಲ್ಲ, ನಮ್ಮ ತಂದೆಯ ಜೊತೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ಪಡೆಯದೇ ನೌಕರಿ ನೀಡಿದ್ದು ಲಕ್ಷ್ಮಣ್ ಸವದಿ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಮಾವ ಡಿಸಿಸಿ ಬ್ಯಾಂಕ್ ನೌಕರ ಅವರು ಎಲ್ಲೆ ಆದರೂ ಕೆಲಸ ಮಾಡಬೇಕು. ಅವರ ವರ್ಗಾವಣೆಯಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಲಕ್ಷ್ಮಣ್ ಸವದಿಯನ್ನು ಮಣಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ವಿರೋಧಿಗಳ ವಿರುದ್ಧ ಗುಡುಗಿದರು.
ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ಧರು.
