Uncategorized

ಮಠದ ಆವರಣದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿ ‘ಬಿಲ್ಡಪ್’ ಕೊಟ್ಟ ಸ್ವಾಮೀಜಿ! ವಿಡಿಯೋ ವೈರಲ್……!

Share

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸುದ್ದಿಯಾಗಿದ್ದಾರೆ. ಮಠದ ಆವರಣದಲ್ಲೇ ಸ್ವಾಮೀಜಿ ಬಂದೂಕಿನಿಂದ ಫೈರಿಂಗ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಳೆದ ಕೆಲವು ತಿಂಗಳುಗಳಿಂದ ಮಠದಿಂದ ದೂರವಿದ್ದರು. ಮೂಲಗಳ ಪ್ರಕಾರ, ಮದ್ಯಪಾನದಂತಹ ಚಟಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ವಾಮೀಜಿಯವರನ್ನು ಮಠದಿಂದ ಹೊರಹಾಕಿದ್ದರು ಎನ್ನಲಾಗಿದೆ. ಈ ನಡುವೆ ಮಠಕ್ಕೆ ಹೊಸ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದವು.

ಹೊಸ ಶ್ರೀಗಳ ನೇಮಕದ ಚರ್ಚೆ ಜೋರಾಗಿರುವಾಗಲೇ ಮಠಕ್ಕೆ ವಾಪಸ್ ಬಂದಿರುವ ಶಾಂತಲಿಂಗ ಸ್ವಾಮೀಜಿ, ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಠದ ಉತ್ತರಾಧಿಕಾರಿ ಸ್ಥಾನಕ್ಕಾಗಿ ತಮ್ಮನ್ನು ವಿರೋಧಿಸುತ್ತಿರುವವರಿಗೆ ಬೆದರಿಕೆ ಹಾಕಲು ಹಾಗೂ ತಮ್ಮ ಪ್ರಭಾವ ಪ್ರದರ್ಶಿಸಲು ಈ ರೀತಿ ಬಿಲ್ಡಪ್ ಕೊಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಪವಿತ್ರ ಮಠದ ಆವರಣದಲ್ಲಿ ಸ್ವಾಮೀಜಿಯೊಬ್ಬರು ಶಸ್ತ್ರಾಸ್ತ್ರ ಬಳಸಿ ಗುಂಡು ಹಾರಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.

Tags:

error: Content is protected !!