Vijaypura

ಸಚಿವ ಎಂ ಬಿ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ, 10 ತಿಂಗಳುಗಳ ಬಳಿಕ ನಡೆದ ಸಭೆ

Share

ಜಿಲ್ಲಾ ಉಸ್ತುವಾರಿ ಸಚಿವ ಎಂ‌ ಬಿ ಪಾಟೀಲ ಅವರ ನೇತೃತ್ವದಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಸಭೆ 10 ತಿಂಗಳುಗಳ ಬಳಿಕ ಮಾಡಲಾಯಿತು. ಹಲವು ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ಹಾಗೂ ಎಚ್ಚರಿಕೆಯನ್ನು ಸಹಿತ ಸಚಿವ ಎಂ ಬಿ ಪಾಟೀಲ ಅವರು ನೀಡಿದರು.

ಹೌದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ, ವಿಠಲ ಕಟಕದೊಂಡ, ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ, ರಾಜುಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಕೇಶವಪ್ರಸಾದ್, ಎನ್ ರವಿಕುಮಾರ್, ಪ್ರಕಾಶ ಹುಕ್ಕೇರಿ, ಹಣಮಂತ ನಿರಾಣಿ ಸೇರಿದಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್ ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು. ರೈತರಿಗೆ ಬೆಳೆ ವಿಮೆ ಸೇರಿದಂತೆ ಪರಿಹಾರ ನೀಡುವಲ್ಲಿ ಯಾವುದೇ ತರಹದಲ್ಲಿ‌ ಸಮಸ್ಯೆ ಆಗ ಕೂಡದು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ನಗರ ನೀರು ಸರಬರಾಜು ಕುರಿತು ನಡೆದ ಚರ್ಚೆ ವೇಳೆ ಕುಡಿಯುವ ನೀರಿನ‌ ಸಮಸ್ಯೆ ಕುರಿತು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ನೀರು ಸರಬರಾಜು ಮಂಡಳಿ ವಿಚಾರವಾಗಿ ಅಧಿಕಾರಿಗಳು ಇಂಗ್ಲಿಷ್ ನಲ್ಲಿ ಮಾಹಿತಿ ನೀಡಿದ್ದ ಕಾರಣ ಎಂ ಎಲ್ ಸಿ ಕೇಶವ ಪ್ರಸಾದ ಅಧಿಕಾರಿಗೆ ತರಾಟೆಗೆ ತೆದುಕೊಂಡರು. ನಾವು ಇರುವದು ಕರ್ನಾಟಕದಲ್ಲಿ ನನಗೆ ಇಂಗ್ಲಿಷ್ ಓದಲು ಬರುವದಿಲ್ಲ, ನಾನು ಕನ್ನಡ ‌ಮಾದ್ಯಮದ ವಿದ್ಯಾರ್ಥಿ, ತಾವು ಇಂಗ್ಲಿಷ್ ನಲ್ಲಿ ಮಾಹಿತಿ ಕೊಟ್ಟರೆ ನಾನು ಹೇಗೆ ಓದಿ ತಿಳಿದುಕೊಳ್ಳಬೇಕು, ಸಂಪೂರ್ಣ ವಾಗಿ ನಮಗೆ ಕನ್ನಡದಲ್ಲೇ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು….

ಇನ್ನೂ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿ 33 ನೇ ಸ್ಥಾನಕ್ಕೆ ಕುಸಿದ ಕಾರಣ ಶಿಕ್ಷಣ ಇಲಾಖೆಯ ಡಿಡಿಪಿಐ ಗೆ ತರಾಟೆಗೆ ತೆಗೆದುಕೊಂಡರು. ಇನ್ನೂ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಇದಕ್ಕೆ ನೇರ ಹೊಣೆಗಾರರು ಜಿಲ್ಲಾ ಪಂಚಾಯತಿ ಸಿಇಒ, ಜಿಲ್ಲಾಧಿಕಾರಿಗಳಿಗೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಮುತ್ವರ್ಜಿ ವಹಿಸಬೇಕು ಎಂದು ಸಚಿವ ಎಂ ಬಿ ಪಾಟೀಲ ಖಡಕ್ ಸೂಚನೆ ನೀಡಿದರು. ಇನ್ನೂ ಡಿಡಿಪಿಐ ಕಚೇರಿಯಲ್ಲಿ ಸರಿಯಾಗಿ ದಾಖಲೆಗಳನ್ನು ಇಟ್ಟಿಲ್ಲ, ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ, ಜೊತೆಗೆ ಒಂದೇ ವರ್ಷದಲ್ಲಿ 120 ಕ್ಕೂ ಅಧಿಕ ಹೊಸ ಶಾಲೆಗಳಿಗೆ ಅನುಮತಿ ಕೊಟ್ಟಿದ್ದಾದರೂ ಹೇಗೆ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ ಆಕ್ರೋಶ ಹೊರ ಹಾಕಿದರು…

ಇನ್ನೂ 10 ತಿಂಗಳು ಬಳಿಕ ನಡೆದ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೇರಿದಂತೆ ಶಾಸಕರುಗಳು ತರಾಟೆಗೆ ತೆಗದುಕೊಂಡರು. ಮುಂಬರುವ ಪ್ರಗತಿ ಪರಿಶೀಲನಾ ಸಭೆ ವೇಳೆಯಲ್ಲಿ ಯಾವುದೇ ಸಮಸ್ಯೆ ಇರಕೂಡದು, ಇಂದು ಚರ್ಚೆಗೀಡಾದ ಸಮಸ್ಯೆಗಳು ಹಾಗೇ ಮುಂದುವರೆದಿದ್ದರೆ ಕ್ರಮದ ಎಚ್ಚರಿಕೆಯನ್ನು ಸಚಿವ ಎಂ ಬಿ ಪಾಟೀಲ ನೀಡಿದರು. ಈ ಸಮಸ್ಯೆ ಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸುತ್ತಾರಾ ಕಾದು ನೊಡೋಣ…

Tags:

error: Content is protected !!