Kagawad

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಗ್ರಾಮದೇವತೆ ಶ್ರೀ ಹಜರತ್ ಮಾಸಾಹೆಬಿ ದೇವಿ ಊರುಸ ಪ್ರಾರಂಭ.

Share

ಸುಮಾರು ನುರು700 ವರ್ಷದ ಇತಿಹಾಸ
ಹೊಂದಿರುವ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಗ್ರಾಮದೇವತೆ ಶ್ರೀ ಹಜರತ್ ಮಾಸಾಹೆಬಿ ಊರುಸ ಬುಧವಾರ 31 ರಿಂದ ಪ್ರಾರಂಭಗೊಂಡಿದ್ದು ಶುಕ್ರವಾರ ದಿನಾಂಕ 2ರ ವರಿಗೆ ದೇವಿ ವುರುಸ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಂದುಗೂಡಿ ಆಚರಿಸುತ್ತಿದ್ದಾರೆ. ಇದು ಒಂದು ಭಾವೈಕ್ಯತೆ ಹಬ್ಬ ಎಂದು ಪ್ರಚಲಿತವಿದೆ.

ಹಜರತ್ ಮಾಸಾಹೇಬಿ ದೇವಿ ಉರುಸ ಹಿನ್ನೆಲೆಯಲ್ಲಿ ಶೀರಗುಪ್ಪಿ ಗ್ರಾಮದ ಲಿಂಗಾಯತ ಸಮಾಜದ ಏಳನೇ ತೆಲಿಮಾರದ ಯುಗಪುರುಷ
ನರಸಗೌಡ ಶಿವಗೌಡ ಪೊಲೀಸ್ ಪಾಟೀಲ್ ಇವರು ದೇವಿ ಭಕ್ತರಾಗಿದ್ದರು. ನೆರೆಯ ಕುಡಚಿ ಪಟ್ಟಣದ ಹಜರತ್ ಮಾಸಾಹೆಬಿ ದೇವಿಯ ಭಕ್ತರಾಗಿದ್ದರಿಂದ ಅವರ ಭಕ್ತಿಗೆ ಮೆಚ್ಚಿ ಹಜರತ್ ಮಾಸಾಯಿಬಿ ದೇವಿ ದೃಷ್ಟಾಂತ ಈ ಸ್ಥಳದಲ್ಲಿ ಆಗಿದ್ದು ಆಗಿಂದು ಈವರಿಗೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಂದಾಗಿ ಉರುಸ್ ಹಬ್ಬ ಆಚರಿಸುತ್ತಿದ್ದಾರೆ.

ಗೌಡರ ಮನೆತನದ ಇಂದಿನ ಪೊಲೀಸ್ ಪಾಟೀಲ್ ಶಿವಾನಂದ ಬಾಬಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಇಲ್ಲಿಯ ಊರುಸ ಹಬ್ಬದ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ಇದರ ನಿಮಿತ್ತವಾಗಿ ಬುಧವಾರ ರಂದು
ಗಂಧ ರಾತ್ರಿ, ಮತ್ತು ದೀರ್ಘ ನಮಸ್ಕಾರ ಕಾರ್ಯಕ್ರಮದಲ್ಲಿ ಸಾವಿರಾರು ಸದ್ಭಕ್ತರು ಪಾಲ್ಗೊಂಡು ತಮ್ಮ ಹರಕೆ ತೀರಿಸುತ್ತಾರೆ.

ಗುರುವಾರ ರಂದು ಬೆಳಿಗ್ಗೆಯಿಂದ ನೈವೇದ್ಯ, ರಾತ್ರಿ ಕಲಾವಿದೆ
ರಾಧಾ ಪಾಟೀಲ್ ಇವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಜರಗಲಿದೆ,

ಶುಕ್ರವಾರ ರಂದು ಕುದುರೆ ಗಾಡಿ, ಹೋರಿ ಓಡಿಸುವ ಶರೆತ್ತು, ಕ್ರಿಕೆಟ್ ಪಂದ್ಯಾವಳಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಹಮ್ಮಿಕೊಂಡಿದ್ದಾರೆ.

ಇದರ ನಿಮಿತ್ಯವಾಗಿ ಸಂಯೋಜಕರಾದ ಶಿವಾನಂದ ಪಾಟೀಲ ಇವರು ಮಾತನಾಡಿ ಇದು ಗ್ರಾಮದ ಗ್ರಾಮದೇವತೆ ಹಬ್ಬ ನಮ್ಮ ಮನೆತನದ ಏಳು ತೆಲಿಮಾರದಿಂದ ಈ ಉರಿಸು ಕಾರ್ಯಕ್ರಮ ನಿರಂತರವಾಗಿ ನೆರವೇರಿಸುತ್ತಾ ಬಂದಿದ್ದೇವೆ. ದರ್ಗಾ ಪರಿಸರ ಜಿರ್ನೋದಾರ
ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದು ಕಟ್ಟಡಕ್ಕಾಗಿ ಮಾಜಿ ಸಂಸದ ಅನ್ನಾಸಾಹೇಬ್ ಜೊಲ್ಲೆ, ಮಾಜಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲಿ ಇವರು 40 ಲಕ್ಷ ಅನುದಾನ ನೀಡಿದ್ದಾರೆ. ಕಟ್ಟಡ ಪೂರ್ಣಗೊಳಿಸಲು ಸುಮಾರು 90 ಲಕ್ಷ ವೆಚ್ಚವಾಗುತಿದೆ ಇದನ್ನು ಪೂರ್ಣಗೊಳಿಸಲು ಎಲ್ಲ ರೀತಿ ಪ್ರಯತ್ನ ನೆರವೇರಿಸುತ್ತಿದ್ದೇನೆ ಎಂದು ಹೇಳಿದರು.

ಈ ವೇಳೆ ಗೌಡರಾದ ಅಶೋಕ್ ಪಾಟೀಲ್, ಬಸಗೌಡ ಪಾಟೀಲ್ ಹಾಗೂ ಅರ್ಚಕರಾದ ಶಬ್ಬೀರ್ ಮುಲ್ಲಾ ಸಹ ಅನೇಕರು ಪಾಲ್ಗೊಂಡಿದ್ದರು.

Tags:

error: Content is protected !!