Vijaypura

ನೀರಾವರಿಯ ಪ್ರಗತಿಗೆ ಸಾಕ್ಷಿಯಾದ ತಿಕೋಟಾದ ರೈತಕ್ಷೇತ್ರೋತ್ಸವ; ನೀರು ಕೊಟ್ಟ ಸಚಿವರಿಗೆ ಬೆಳೆಗಳಿಂದ ತುಲಾಭಾರ

Share

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ , ತಿಕೋಟಾ ತಾಲ್ಲೂಕು ಘಟಕದ ವತಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಶ್ರೀ ಸಾತಲಿಂಗಯ್ಯ ಶಂಕ್ರಯ್ಯ ಹಿರೇಮಠ್ ಅವರ ತೋಟದಲ್ಲಿ ಆಯೋಜಿಸಿದ್ದ ರೈತಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಲ್ಗೊಂಡಿದ್ದರು. ರೈತರ ಸ್ವಾವಲಂಬಿ ಬದುಕಿಗೆ ಗೌರವ ತಂದುಕೊಡುವುದು ಕೃಷಿ; ಕೃಷಿಯ ಜೀವಾಳವೇ ನೀರು.

ನನಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ ವ್ಯವಸ್ಥೆ ಕಲ್ಪಿಸುವ ಮೂಲಕ ನಮ್ಮೆಲ್ಲ ರೈತರಿಗೆ ನೆರವಾಗುತ್ತಾ ಬಂದಿರುವ ಹಲವು ವಿಚಾರಗಳು, ನಡೆಸಿದ ಕಾನೂನು ಸಮರಗಳು ಹಾಗೂ ಅವುಗಳಿಂದ ಲಭಿಸಿದ ಐತಿಹಾಸಿಕ ತೀರ್ಪುಗಳನ್ನು ಸವಿವರವಾಗಿ ಪ್ರಸ್ತಾಪಿಸಿದರು. ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಯಲ್ಲಿರುವ ನೀರಾವರಿ ಯೋಜನೆಗಳು ಹಾಗೂ ಭವಿಷ್ಯದಲ್ಲಿ ಜಾರಿಗೆ ಬರಲಿರುವ ಯೋಜನೆಗಳ ಕುರಿತು ಸಹ ಮಾಹಿತಿ ಹಂಚಿಕೊಂಡರು.

ಕಬ್ಬು ಬೆಳೆಗಾರರಿಗೆ ವಿಶೇಷ ತಜ್ಞರಿಂದ ಚಿಂತನಗೋಷ್ಠಿಗಳು, ಕೃಷಿಗೆ ಸಂಬಂಧಿಸಿದ ಉಪನ್ಯಾಸಗಳು ಸೇರಿದಂತೆ ಹಲವಾರು ಚಿಂತನ–ಮಂಥನ ಗೋಷ್ಠಿಗಳು ಕಾರ್ಯಕ್ರಮದ ಭಾಗವಾಗಿದ್ದವು. ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರು, ಗುಣದಾಳು ಹಿರೇಮಠದ ಡಾ. ವಿವೇಕಾನಂದ ದೇವರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಚುನ್ನಪ್ಪ ಪೂಜೇರಿ, ಸ್ಥಳೀಯ ಜನಪ್ರತಿನಿಧಿಗಳು, ಸಹಸ್ರಾರು ರೈತರು-ರೈತ ಮುಖಂಡರು, ಮಹಿಳೆಯರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೀರಾವರಿ ಯೋಜನೆಗಳ ಲಾಭ ಪಡೆದ ರೈತರು ತಾವು ಬೆಳೆದ ಪೊಪ್ಪಾಯ, ಪೇರಲ, ಕಬ್ಬು, ತರಕಾರಿ, ಅಡಿಕೆ, ಬಾಳೆಗೊನೆಗಳಿಂದ ತುಲಾಭಾರ ನಡೆಸಿ, ತಮ್ಮ ಕೃತಜ್ಞತೆಯನ್ನು ತಿಳಿಸಿದರು.

Tags:

error: Content is protected !!