ಪಿಪಿಪಿ ಕಾಲೇಜ್ ಬೇಡ ಸರ್ಕಾರಿ ಮೆಡಿಕಲ್ ಕಾಲೇಜ್ ಬೇಕು ಎಂದು ಕಳೆದ 100 ದಿನಗಳಿಂದ ವಿಜಯಪುರ ನಗರದಲ್ಲಿ ಹೋರಾಟ ನಡೆಸಲಾಗುತ್ತಿದೆ. ಕಳೆದ 99 ದಿನಗಳಿಂದ ವಿವಿಧ ಹಂತದ ಹೋರಾಟ ನಡೆದಿದೆ.ಬೀದಿಗಿಳಿದು ಹೋರಾಟ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದರ ಮೂಲಕ ಹೋರಾಟ, ಪ್ರತಿ ತಾಲೂಕುಗಳಲ್ಲಿ ಹೋರಾಟ, ಕರಾಳ ದೀಪಾವಳಿ ಆಚರಣೆ, ರಕ್ತದ ಮೂಲಕ ಸಹಿ ಸಂಗ್ರಹ, ಪತ್ರ ಚಳುವಳಿ ಕಪ್ಪುಬಟ್ಟೆ ಚಳುವಳಿ, ರಂಗೋಲಿ ಚಳಿವಳಿ, ಹೀಗೆ ವಿವಿಧ ಆಯಾಮಗಳಲ್ಲಿ ಹೋರಾಟ. ಈಗ ಹೋರಾಟಕ್ಕೆ ನೂರು ದಿನ ತುಂಬಿದೆ. ಈ ಸಂದರ್ಭದಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡುತ್ತೇವೆ ಎಂದು ಹೋರಾಟಗಾರರು..
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೋರಾಟಗಾರರು ಮುಖ್ಯಮಂತ್ರಿಗಳ ಭೇಟಿ ಮಾಡಿಸಿದ್ದಾರೆ. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ, ಸಚಿವ ಸಂಪುಟ ಸಭೆ ಅನುಮೋದಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.

