ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಸತೀಶ ಶುಗರ ಅವಾರ್ಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಅವರು ಚಿಕ್ಕೋಡಿ ಪಟ್ಟಣದ ಕಿವಡ ಮೈದಾನದಲ್ಲಿ ನಾಳೆ ನಡೆಯುವ 2 ನೇ ಸತೀಶ ಶುಗರ ಅವಾರ್ಡನ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ಪೂರ್ವ ಸಿದ್ದತೆಯನ್ನು ಪರಿಶೀಲಿಸಿ ಮಾತನಾಡಿದರು ತಂದೆ ಸಚಿವ ಸತೀಶ ಜಾರಕಿಹೊಳಿಯವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದೇವೆ.ಚಿಕ್ಕೋಡಿಯಲ್ಲಿ 2 ನೇ ಸತೀಶ ಶುಗರ ಅವಾರ್ಡ ಇದಾಗಿದೆ.ಪ್ರಾಥಮಿಕ-ಪ್ರೌಢ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಲಿದ್ದಾರೆ.
ಈಗಾಗಲೇ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿನ ಆಯ್ಕೆ ಪ್ರಕ್ರಿಯೆಯ ಮುಗದಿದೆ.ಉದ್ಘಾಟನೆ ಕಾರ್ಯಕ್ರಮಕ್ಕೆ ತಂದೆ ಸತೀಶ ಜಾರಕಿಹೊಳಿ,ಸಹೋದರ ರಾಹುಲ ಜಾರಕಿಹೊಳಿಯವರು ಕೂಡಾ ಬರುತ್ತಾರೆ.ಚಿಕ್ಕೋಡಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.ಇದಕ್ಕೂ ಮುಂಚಿತವಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ವಿವಿಧ ಭಾಗಗಳಿಂದ ಆಗಮಿಸಿದ ಬಂದಂತಹ ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಬೈಟ್-ಪ್ರಿಯಾಂಕಾ ಜಾರಕಿಹೊಳಿ,ಸಂಸದೆ
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ,ಕಾಂಗ್ರೆಸ್ ಮುಖಂಡ ಪ್ರಭಾಕರ ಕೋರೆ,ರಾಮಕೃಷ್ಣ ಪಾನಗೂಡೆ,ಗಣೇಶ ಮೋಹಿತೆ,ಶಿವಾನಂದ ಮರ್ಯಾಯಿ,ಎಚ್.ಎಸ್.ನಸಲಾಪೂರೆ,ರಿಯಾಜ ಚೌಗಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
