Bagalkot

ಮುಳುಗಡೆ ಜಿಲ್ಲೆಯ ನದಿಗಳಲ್ಲಿ  ಆಂದ್ರ ಮೀನುಗಾರರ ಕಣ್ಣು.

Share

ಆ ಜಿಲ್ಲೆಯಲ್ಲಿ ಕೃಷ್ಣಾ ಘಟಪ್ರಭಾ ಮಲಪ್ರಭಾ ಒಟ್ಟು ಮೂರು ನದಿಗಳು ಹರಿಯುತ್ತಿವೆ. ಇದೀಗ ‌ಕೃಷ್ಣಾ ತೀರದಲ್ಲಿ   ಮೀನುಗಾರಿಕೆ ಕೂಡ ನಡೆಯುತ್ತಿದೆ.ಆದರೆ ಮೀನುಗಾರಿಕೆಯಲ್ಲಿ ಆಂಧ್ರ ಮೂಲದ ಮೀನುಗಾರು ಸದ್ದಿಲ್ಲದೆ ನುಸುಳಿದ್ದಾರೆ. ನಿಯಮಗಳನ್ನ ಗಾಳಿಗೆ ತೂರಿ,ಕೋಟಿ ಕೋಟಿ ದಂದೆ‌ ನಡೆಸಿದ್ದಾರೆ. ಅವರ ಕಳ್ಳದಂದೆಗೆ ಇಲಾಖೆ ಬ್ರೆಕ್‌ ಹಾಕಲು ಜಿಲ್ಲಾಡಳಿತ ಮುಂದಾಗಿದೆ.ಮುಳುಗಡೆ ಜಿಲ್ಲೆಯ ನದಿಗಳಲ್ಲಿ ಆಂದ್ರದವರ ಅಕ್ರಮ ಮೀನುಗಾರಿಕೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….

ಬಾಗಲಕೋಟೆ ಜಿಲ್ಲೆಯ ಮೀನಿನ ಮೇಲೆ ಆಂಧ್ರ ಪ್ರದೇಶದ ಮೀನುಗಾರರ ಕಣ್ಣು…

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಮೀನುಗಾರರ ಬದುಕಿಗೆ ಇಲ್ಲಿ ನಿತ್ಯ ತಪ್ಪದ ಪರದಾಟ..

ನದಿಗಳಲ್ಲಿ ಪರ್ಮಿಷನ್ ಪಡೆಯೋರಾರೋ, ಮೀನು ಹಿಡಿಯೋರಾರೋ…

ಅಕ್ರಮ ಮೀನುಗಾರಿಕೆ ನಡೆಸೋರ ವಿರುದ್ಧ ಕ್ರಮಕ್ಕೆ ಇಲ್ಲಾ ಇಲ್ಲಿ ಅವಕಾಶ..

ಕೃಷ್ಣಾ ನದಿಯ ಜಲಾಶಯಗಳ 5 ಕಿಮೀ ವ್ಯಾಪ್ತಿಯಲ್ಲಿ ಅನುಮತಿಯೊಂದಿಗೆ ನಡೆಯುವ ಫಿಶಿಂಗ್…

ಬಾಗಲಕೋಟೆ & ವಿಜಯಪುರ ಜಿಲ್ಲೆ ಸೇರಿ 5 ಸಾವಿರ ಮೀನುಗಾರರಿಗೆ ಮೀನುಗಾರಿಕೆಗೆ ಅನುಮತಿ..

ಸಧ್ಯ ಆಂದ್ರಪ್ರದೇಶದಿಂದ ಬಂದು ನಿಯಮಗಳನ್ನ ಗಾಳಿಗೆ ತೂರಿ ಆಂದ್ರದವರಿಂದ ಅಕ್ರಮವಾಗಿ ಮೀನುಗಾರಿಕೆ…


ಒಂದೆಡೆ ಒಡಲಲ್ಲಿ ನೀರು ತುಂಬಿಕೊಂಡು ನಿಂತಿರೋ ಕೃಷ್ಣಾ ನದಿ.ಮತ್ತೊಂದೆಡೆ ನದಿಯ ಪಕ್ಕ ಆಂದ್ರ ಮೂಲದ ಮೀನುಗಾರರ ಟೆಂಟ್ ಗಳು.ಇನ್ನೊಂದೆಡೆ ಅಕ್ರಮವಾಗಿ ಮಷಿನ್  ಬೋಟಿಂಗ್ ಬಳಸಿ ಮೀನುಗಾರಿಕೆ ನಡೆಸುತ್ತಿರುವವ್ರ ಮೇಲೆ  ಮೀನುಗಾರಿಕೆ  ಇಲಾಖೆ ಅಧಿಕಾರಿಗಳ ದಾಳಿ.ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಕೃಷ್ಣಾ ನದಿ ತೀರದ ಆಲಮಟ್ಟಿ ಹಿನ್ನೀರು ಬಾಗಲಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ. ಹೌದು ಬಸವಸಾಗರ  ಜಲಾಶಯ ವ್ಯಾಪ್ತಿ ಕೃಷ್ಣಾ ನದಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಅನುಮತಿ ಪಡೆದು ಹರಿಗೋಲು ದೋಣಿ ಮೂಲಕ ಆ ಪ್ರದೇಶದಲ್ಲಿ  ಮೀನುಗಾರಿಕೆಗೆ ಅನುಮತಿ ಪಡೆದು ಮೀನು ಹಿಡಿಯಬೇಕು. ಆದರೆ ಇಲ್ಲಿ ಸದ್ದಿಲ್ಲದೇ ಆಂಧ್ರಪ್ರದೇಶದ ಮೀನುಗಾರರು  ನಿಯಮ ಉಲ್ಲಂಘಿಸಿ ಮಷಿನ್ ಬೋಟ್ ಬಳಿಸಿ ಆಂದ್ರ ಮೂಲದ ಮೀನುಗಾರರು ಮೀನುಗಾರಿಕೆಯನ್ನ ನಡೆಸುತ್ತಿದ್ದಾರೆ.ಇದ್ರಿಂದ ಜಿಲ್ಲೆಯಲ್ಲಿ ಲೈಸನ್ಸ್ ಪಡೆದು ಮೀನುಗಾರಿಕೆ ಮಾಡ್ತಿದ್ದ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಅಕ್ರಮವಾಗಿ ಆಂದ್ರ ಮೂಲದವರು ಮೀನುಗಾರಿಕೆ ಮಾಡ್ತಿರೋದು ಅಧಿಕಾರಿಗಳ ದಾಳಿ ವೇಳೆ ಸಾಭೀತಾಗಿದೆ. ಅಕ್ರಮ ಮೀನುಗಾರಿಕೆಗೆ ಬ್ರೇಕ್ ಹಾಕಿ ಸ್ಥಳೀಯ ಮೀನುಗಾರಿಕೆಗೆ ಜಿಲ್ಲಾಡಳಿತ ಉತ್ತೇಜನ ನೀಡಬೇಕಿದೆ ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ…

ಇನ್ನು ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಆಂದ್ರಪ್ರದೇಶದಿಂದ ಬಂದ ಮೀನುಗಾರರು ಮೀನುಗಾರಿಕೆ ಮಾಡ್ತಿರೋದು ಪತ್ತೆಯಾಗಿದೆ. ಅಂತವರ ವಿರುದ್ಧ ಬಾಗಲಕೋಟೆ ಗ್ರಾನೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಂಧ್ರದವರು ಬಂದು ಯಂತ್ರ ಬಳಸಿ ಫಿಶಿಂಗ್ ಮಾಡುತ್ತಿದ್ದರೆ, ಇತ್ತ ಸ್ಥಳೀಯ ಮೀನುಗಾರರು ಹರಿಗೋಲಿನ ಮೂಲಕ ಫಿಶಿಂಗ್ ಮಾಡೋದ್ರಿಂದ ತೀವ್ರ ಸಂಕಷ್ಟವಾಗಿದೆ.ಯಂತ್ರಕ್ಕೆ ಅವಕಾಶ ಇರದಿದ್ರೂ ನಿಯಮ ಗಾಳಿಗೆ ತೂರಿ ಮೀನುಗಾರಿಕೆ ನಡೆಯುತ್ತಿದೆ.ಯಂತ್ರ ಬಳಕೆ ವಿರುದ್ಧ ಸ್ಥಳೀಯ ಮೀನುಗಾರರು ಅಸಮಾಧಾನ ಹೊರ ಹಾಕಿದ್ದು  ಸೂಕ್ತ ಕ್ರಮಕ್ಕೆ ಆಗ್ರಹಿಸ್ತಿದ್ದಾರೆ.ಇಲಾಖೆ ಅನುಮತಿ ಪಡೆದು ಬದುಕಿಗಾಗಿ ಪರದಾಡುತ್ತಿರೋ ಬಾಗಲಕೋಟೆ ಜಿಲ್ಲೆಯ ಮೀನುಗಾರರ ಒಂದು ಕಡೆಯಾದರೆ,ಅತ್ತ ಯಾಂತ್ರಿಕ ಬೋಟ್ ಬಳಸಿ ಬೇಕಾಬಿಟ್ಟಿಯಾಗಿ ಅಕ್ರಮವಾಗಿ ಮೀನುಗಾರಿಕೆಯನ್ನ ಆಂಧ್ರಪ್ರದೇಶದ ಮೀನುಗಾರರು ದಂದೆ ಮಾಡಿಕೊಂಡಿದ್ದಾರೆ.ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿವರ್ಷ 100ಕೋಟಿಗೂ ಅಧಿಕ ವಹಿವಾಟು ಹಿನ್ನೆಲೆ ಹೊರ ರಾಜ್ಯದವರ ಕಣ್ಣು ಕುಕ್ಕಿಸುತ್ತಿದೆ.2024-25ನೇ ಸಾಲಿನಲ್ಲಿ 16 ಸಾವಿರ ಟನ್ ಮೀನು ಹಿಡಿಯಲಾಗಿದ್ದು, ನಡೆದಿದ್ದು ಅಂದಾಜು 100 ಕೋಟಿಗೂ ಅಧಿಕ ವಹಿವಾಟು.ಹೀಗಾಗಿ ಇತ್ತೀಚಿನ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿದೆ.ಮೀನಿಗೆ ಪ್ರತಿ ಕೆಜಿ ಆಧಾರದ ಮೇಲೆ ರಾಯ ಧನ ಸಂಗ್ರಹಕ್ಕೆ ಜಿಲ್ಲಾಡಳಿತ ಚಿಂತನೆ ಮಾಡುತ್ತಿದೆ‌.ಈ ನಡುವೆ ಬೇಕಾಬಿಟ್ಟಿ ಮೀನುಗಾರಿಕೆ ತಡೆಗೆ ಒಂದೇ ಕಡೆಯಿಂದ ಮೀನುಗಾರಿಕೆಗೆ ಅವಕಾಶಕ್ಕೂ ಚಿಂತನೆ ನಡೆಸಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸದ್ದಿಲ್ಲದೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಆಂದ್ರದ ಮೀನುಗಾರರ ಮೀನುಗಾರಿಕೆ  ದಂದೆ ಜೋರಾಗಿದ್ದು,ಜಿಲ್ಲಾಡಳಿತ ಮತ್ತು ಜಿಲ್ಲಾ ಮೀನುಗಾರಿಕೆ ಇಲಾಖೆ ಅಕ್ರಮ ಮೀನುಗಾರಿಕೆಯನ್ನ ಹೆಡೆಮೂರಿ ಕಟ್ಟಿ ಸ್ಥಳೀಯ ಮೀನುಗಾರರನ್ನ ಉತ್ತೇಜಿಸುವ ಕಾರ್ಯ ಮಾಡುವ ಮೂಲಕ ಸ್ಥಳೀಯ ಮೀನುಗಾರರ ಬದುಕಿಗೆ ಬೆಳಕಾಗಲಿ ಅನ್ನೋದು  ಸ್ಥಳೀಯ ಮೀನುಗಾರರ ಆಗ್ರಹ…

Tags:

error: Content is protected !!