hubbali

ಸಿಎಂ ಸಭೆಗೆ ಪತ್ರ ಬರೆದು ಕೈಕಟ್ಟಿ ಕುಳಿತರು ಒಂದು ಫೋನ್ ಮಾಡಿಲ್ಲ: ಕೇಂದ್ರ ಸಚಿವ ಜೋಶಿ ಬೇಸರ

Share

ಸಿಎಂ ಸಿದ್ದರಾಮಯ್ಯ ಕರೆದ ಸಭೆಗೆ ಕೇಂದ್ರ ಸಚಿವರ ಗೈರು ವಿಚಾರ, ಸಿಎಂ ನಮಗೆಲ್ಲಾ ಮೇಲ್ ಮೂಲಕ ಪತ್ರ ಕಳುಹಿಸಿದ್ದರು. ಪತ್ರ ಬಿಟ್ಟರೆ ಒಬ್ಬರು ಫೋನ್ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇನ್ನೊಂದೆಡೆ ಪ್ರಧಾನಿ ಜೊತೆ ನನ್ನ ಮೀಟಿಂಗ್ ಇದೆ ಹೀಗಾಗಿ ಬರಲಿಕ್ಕೆ ಆಗಲ್ಲ ಅಂತ ಹೇಳಿದ್ದೇನೆ. ಸಿಎಂ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಆದರೆ ಯಾರಿಗಾದರೂ ಫೋನ್ ಮಾಡಿ ಕೇಳಿದರೆ ನಮ್ಮ ಸಮಯ ನೋಡಿಕೊಂಡು ಹೋಗುತ್ತಿದ್ದೆವು ಕರ್ನಾಟಕ ನೆಲ ಜಲಕ್ಕಾಗಿ ನಾವೆಲ್ಲಾ ಬದ್ಧರಾಗಿದ್ದೇವೆ ಅವರು ಕರೆದಾಗ ಖಂಡಿತ ಹೋಗುತ್ತೇವೆ ಎಂದರು.

ಇನ್ನು ಬಂಗಾಳದಲ್ಲಿ ಬಾಬ್ರಿ ಮಸೀದಿ ರೀತಿಯಲ್ಲೇ ಮಸೀದಿ ನಿರ್ಮಾಣ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು ಅವರು.
“ಇದು ಮಮತಾ ಬ್ಯಾನರ್ಜಿ ಬೆಂಬಲ ಇಲ್ಲದೇ ಆಗಲು ಸಾಧ್ಯವಿಲ್ಲ, ತುಷ್ಟಿಕರಣದ ಪರಮಾವಧಿಯಿದು. ಬಂಗಾಳಕ್ಕೂ ಬಾಬ್ರಿ ಮಸೀದಿಗೂ ಏನು ಸಂಬಂಧ? ಬಂಗಾಳದಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಹಾಳಾಗಿದೆ ಎಂದು ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಬರೀ ನಾಟಿ ಕೋಳಿ ಸೇರಿ ಮೆನು ಬಗ್ಗೆ ಚರ್ಚೆ ಆಗ್ತಿದೆ. ಅಧಿಕಾರ ಹಂಚಿಕೆ ಗೊಂದಲಕ್ಕೆ ಫುಲ್ ಸ್ಟಾಪ್ ಹಾಕೋ ಕೆಲಸ ಆಗ್ತಿಲ್ಲ ಕಾಂಗ್ರೆಸ್‌ ಕಮಾಂಡ್ ಇಲ್ಲದ ಹೈ ಆಗಿದೆ. ಶಾಸಕರ ವ್ಯಾಪಾರ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹಿಂದೆ ಹಬ್ಲೊಟ್ ವಾಚ್ ಕಟ್ಟಿಕೊಂಡಿದ್ದರು. ಇದೀಗ ಮತ್ತೊಂದು ದುಬಾರಿ ವಾಚ್ ಕಟ್ಟಿಕೊಂಡಿದ್ದಾರೆ.

ಸಿದ್ದರಾಮಯ್ಯ ಇಲ್ಲಿಯವರೆಗೆ ವಾಚ್ ಹೇಗೆ ಬಂತು ಅಂತ ಹೇಳಿಲ್ಲ. ದುಬಾರಿ ವಾಚ್ ಕಟ್ಟಿಕೊಳ್ಳೋ ಇವರು ಸಮಾಜವಾದಿಗಳು ಅಂತ ಹೇಳ್ತಾರೆ. ಸಮಾಜವಾದಿ ಅನ್ನೋರು ಮಜಾವಾದಿ ಆದ್ರೆ ಏನಾಗುತ್ತೆ ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಹ್ಲಾದ ಜೋಶಿ ಅವರ ಹೇಳಿದರು.

Tags:

error: Content is protected !!