BELAGAVI

ಬೆಳಗಾವಿಯ ಅಂಬೇಡ್ಕರ್ ಉದ್ಯಾನವನದಲ್ಲಿ ನಾಳೆ 208ನೇ ಭೀಮಾ ಕೋರೆಗಾಂವ್ ಐತಿಹಾಸಿಕ ವಿಜಯೋತ್ಸವ…..

Share

ಭಾರತ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹಾಗೂ ದಲಿತರ ಇತಿಹಾಸ ಸಾರುವ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ನಾಳೆ, ಜನವರಿ 1 ಗುರುವಾರದಂದು ಬೆಳಗಾವಿ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಗಾವಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಂತ ಉತ್ಸಾಹದಿಂದ ಈ ಐತಿಹಾಸಿಕ ವಿಜಯೋತ್ಸವವನ್ನು ಆಚರಿಸಲಾಗುತ್ತಿದ್ದು, ಬೆಳಿಗ್ಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಸಮಾರಂಭದಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳು, ದಲಿತ ಚಳವಳಿಯ ಕಾರ್ಯಕರ್ತರು, ವಿಚಾರವಂತರು ಮತ್ತು ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಪತ್ರಕರ್ತ ಮತ್ತು ಕೆ. ಎನ್. ದೊಡಮನಿ ಅವರು ಭೀಮಾ ಕೋರೆಗಾಂವ್ ವಿಜಯೋತ್ಸವದ ಐತಿಹಾಸಿಕ ಮತ್ತು ಸಾಮಾಜಿಕ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಮೂಲಕ ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರುವ ಸಂಕಲ್ಪ ಮಾಡಲಾಗಿದೆ. ಮಲ್ಲೇಶ್ ಚೌಗಲೆ, ಮಲ್ಲೇಶ್ ಕುರಂಗಿ, ಜೀವನ ಕುರ್ಣೆ ಸೇರಿದಂತೆ ಹಲವು ದಲಿತ ಮುಖಂಡರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದು, ಸರ್ವರೂ ಭಾಗವಹಿಸುವಂತೆ ಕೋರಿದ್ದಾರೆ.

Tags:

error: Content is protected !!