ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಕಾಕ್ ಮತ್ತು ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಬೇಕೆಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಇಂದು ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕಿನ ಸೌಹಾರ್ದ ಸಭೆಯ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಮೊದಲೂ ಆಯೋಗವು ವರದಿ ನೀಡಿದಂತೆ ಚಿಕ್ಕೋಡಿ ಮತ್ತು ಗೋಕಾಕ್ ಎರಡು ಜಿಲ್ಲೆಗಳಾಗಬೇಕೆಂದು ಹೇಳಲಾಗಿತ್ತು. ಇದಕ್ಕೆ ಮೊದಲಿನಿಂದಲೂ ಕೂಗಿದೆ. ಇದರಿಂದ ಒಳ್ಳೆಯ ಆಡಳಿತವನ್ನು ನೀಡಬಹುದು. ಡಿಸಿಸಿ ಬ್ಯಾಂಕ್ ಬಿಜಿಸಿ ಆಗುತ್ತದೆ. ಅಲ್ಲದೇ ಹಾಲು ಒಕ್ಕೂಟವೂ ಕೂಡ ವಿಸ್ತರಿಸುತ್ತದೆ. ಶಾಸಕರು, ಸಚಿವರು, ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಕಾಕ್ ಮತ್ತು ಚಿಕ್ಕೋಡಿ ಜಿಲ್ಲೆಯನ್ನಾಗಿ ವಿಭಜಿಸಬೇಕು. ಬೈಲಹೊಂಗಲದಲ್ಲಿ ಬ್ರಿಟಿಷ್ ಕಾಲದಿಂದಲೂ ಎಸಿ ಕಾರ್ಯಾಲಯವಿದೆ. ಆದರೂ ಆಯೋಗದ ವರದಿ ಚಿಕ್ಕೋಡಿ ಮತ್ತು ಗೋಕಾಕನ್ನು ಪ್ರತ್ಯೇಕ ಜಿಲ್ಲೆಯಾಗಿಸಲೂ ಹೇಳಿದೆ. ಜೆ.ಎಚ್. ಪಟೇಲ್ ಅವರು ಇದ್ದಾಗಲೂ ಸಹ ಘೋಷಣೆಯಾಗಿತ್ತು. ಆದರೇ, ರಾಜಕೀಯ ಒತ್ತಡದಿಂದ ಹಿಂಪಡೆಯಲಾಯಿತು. ಸರ್ಕಾರ ಬೇಗನೆ ಜಿಲ್ಲೆ ವಿಭಜನೆಯ ಬಗ್ಗೆ ನಿರ್ಣಯಿಸಬೇಕು ಎಂದರು.

