ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಹಾಗೂ ರಾಜ್ಯ ರಾಜಕಾರಣದ ಸದ್ಯದ ಬೆಳವಣಿಗೆಗಳ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಡಿಕೆಶಿ ಅವರು ಎರಡು ಪ್ರಮುಖ ಇಲಾಖೆಗಳ ಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು. ಪಕ್ಷದ ಸಂಘಟನೆ ಹಾಗೂ ಸರ್ಕಾರದ ಕೆಲಸಗಳಿಗಾಗಿ ಅವರು ದೆಹಲಿಗೆ ಹೋಗುವುದು ಸಹಜ, ಇದರಲ್ಲಿ ಯಾವುದೇ ವಿಶೇಷತೆಯಿಲ್ಲ ಎಂದು ಸಚಿವರು ತಿಳಿಸಿದರು.
“ನಾನೇ ಮುಖ್ಯಮಂತ್ರಿ” ಎಂದು ಸಿದ್ದರಾಮಯ್ಯ ಅವರು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಆರಂಭದಲ್ಲಿ ಯಾವುದೇ ಒಪ್ಪಂದವಾಗಿಲ್ಲ. ಸಿಎಂ ಸ್ಥಾನದ ಕುರಿತ ಗೊಂದಲಗಳಿಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ನಮಗೂ ಈ ಚರ್ಚೆಗಳು ಬೇಗ ಮುಗಿಯಲಿ ಎಂಬ ಆಶಯವಿದೆ ಎಂದರು.
ಸಚಿವ ಕೆ.ಎನ್. ರಾಜಣ್ಣ ಹೈಕಮಾಂಡ್ಗೆ ಪತ್ರ ಬರೆದಿರುವ ವಿಚಾರ ನಮಗೆ ತಿಳಿದಿದೆ. ಪಕ್ಷದೊಳಗೆ ಸಣ್ಣಪುಟ್ಟ ‘ಕೋಲ್ಡ್ ವಾರ್’ ಸಹಜ, ಆದರೆ ನಾವೆಲ್ಲರೂ ಒಂದೇ ಪಕ್ಷದವರು.ಡಿಸೆಂಬರ್ 27 ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ನಡೆಯಲಿದ್ದು, ಸಿಎಂ ಮತ್ತು ಡಿಸಿಎಂ ಅದರಲ್ಲಿ ಭಾಗವಹಿಸಲಿದ್ದಾರೆ. ಸಭೆಯ ಅಜೆಂಡಾ ಪ್ರಕಾರವೇ ಚರ್ಚೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದರು. ಸಂಕ್ರಾಂತಿ ನಂತರ ಸಿಎಂ ಬದಲಾವಣೆ ಎಂಬ ವದಂತಿಗಳಿಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, “ಊಟದಲ್ಲಿ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ, ನಮ್ಮದೇನಿದ್ದರೂ ಅಭಿವೃದ್ಧಿ ಬಗ್ಗೆ ಚರ್ಚೆ ಅಷ್ಟೇ” ಎಂದು ನಕ್ಕರು.
