Athani

ಶಹಾಜೀರಾಜೇ ಭೋಸಲೆ ಅವರ ಸಮಾಧಿ 5 ಕೋಟಿಯಲ್ಲಿ ಅಭಿವೃದ್ಧಿ; ಸಚಿವ ಸತೀಶ್ ಜಾರಕಿಹೊಳಿ

Share

ಛತ್ರಪತಿ ಶಿವಾಜೀ ಮಹಾರಾಜರು ಕೇವಲ ಒಂದು ಜಾತಿ ಧರ್ಮಕ್ಕೆ ಸಿಮೀತವಾಗಿರದೇ, ಅವರು ಇಡೀ ಮಾನವಕುಲಕ್ಕೆ ಅವರು ನಾಯಕರು. ಅವರ ತತ್ವದರ್ಶಗಳು, ಯುದ್ಧನೀತಿ ಎಲ್ಲರಿಗೂ ಮಾದರಿ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಇಂದು ಅಥಣಿಯಲ್ಲಿ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿ ಅನಾವರಣ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅನೇಕ ಗಣ್ಯ ನಾಯಕರು ಮತ್ತು ಮಠಾಧೀಶರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಸಂಭಾಜೀ ಭಿಡೇ ಗುರುಜೀ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಾರ್ಮಿಕ ಸಚಿವರಾದ ಸಂತೋಷ ಲಾಡ್, ಅಥಣಿ ಶಾಸಕ ಲಕ್ಷ್ಮಣ ಸವದಿ, ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ, ಮಾಜಿ ಶಾಸಕರಾದ ಮಹೇಶ್ ಕುಮಠಳ್ಳಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ಮಠಾಧೀಶರು ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಅಥಣಿ ಮತ್ತು ಕಾಗವಾಡ ಜನರ ಬಹುದಿನಗಳ ಬೇಡಿಕೆ ಬಾಳಾಸಾಹೇಬ್ ಪಾಟೀಲರ ಪ್ರಯತ್ನದಿಂದ ಇಂದು ಪೂರ್ಣಗೊಂಡಿದೆ. ಛತ್ರಪತಿ ಶಿವಾಜೀ ಮಹಾರಾಜರು ಕೇವಲ ಒಂದು ಜಾತಿ ಧರ್ಮಕ್ಕೆ ಸಿಮೀತವಾಗಿರದೇ, ಅವರು ಇಡೀ ಮಾನವಕುಲಕ್ಕೆ ಅವರು ನಾಯಕರು. ಅವರ ತತ್ವದರ್ಶಗಳು, ಯುದ್ಧನೀತಿ ಎಲ್ಲರಿಗೂ ಮಾದರಿ. ಅವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ಜಾರಿ ಮಾಡಬೇಕಾಗಿದೆ. ಶಿವಾಜೀ ಮಹಾರಾಜರು ಭಾರತದ ಆಸ್ತಿ. ಕರ್ನಾಟಕದ ಹೊದೆಗೇರೆಯಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜರ ತಂದೆಯವರಾದ ಶಹಾಜೀ ಮಹಾರಾಜರ ಸಮಾಧಿಯ ಅಭಿವೃದ್ಧಿ ಯಾವುದೇ ಸರ್ಕಾರ ಹಣ ನೀಡಿರಲಿಲ್ಲ. ನಮ್ಮ ಸರ್ಕಾರ 5 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಇನ್ನು 5 ಕೋಟಿಯ ಯೋಜನೆಯಿದೆ ಎಂದರು.


ಇನ್ನು ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಗೋಹತ್ಯೆಯಲ್ಲಿ ತೊಡಗಿದ್ದವರ ತಲೆಯನ್ನೇ ಕತ್ತರಿಸಿ ಶಿವಾಜೀ ಮಹಾರಾಜರು ಗೋಹತ್ಯೆಯನ್ನು ತಡೆದಿದ್ದಕ್ಕೆ ನಮ್ಮ ಕರ್ನಾಟಕದ ವಿಜಯಪುರ ಸಾಕ್ಷಿಯಾಗಿದೆ. 2028ರಲ್ಲಿಯೂ ಇದೇ ಮಾದರಿಯಲ್ಲಿ ದೇಶದ್ರೋಹಗಳ ತಲೆ ಕತ್ತರಿಸುವ ಕೆಲಸ ಮಾಡಬೇಕಾಗಿದೆ. ಇನ್ನು ಜನರಿಗೆ ನಮ್ಮತನ ನಮ್ಮ ಸಂಸ್ಕೃತಿ ಉಳಿಸುವುದು ಅಗತ್ಯವಾಗಿದೆ ಎಂದರು.

ಶಿವಾಜಿ ಮಹಾರಾಜರ ಮೂರ್ತಿ ಅನಾವರಣವು ಪ್ರಾದೇಶಿಕ ಸಾಂಸ್ಕೃತಿಕ ಗೌರವ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕವಾಗಿ ಜನಮನ ಸೆಳೆಯಿತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾಜಿ ಮಹಾರಾಜರಿಗೆ ಗೌರವ ಸಲ್ಲಿಸಿದರು.

Tags:

error: Content is protected !!