ಕನ್ನೇರಿ ಶ್ರೀಗಳು ಕೆಲ ಲಿಂಗಾಯತ ಸ್ವಾಮೀಜಿಗಳನ್ನು ‘ಬಸವ ತಾಲಿಬಾನಿ’ ಎಂದು ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಬೆಂಬಲದ ಹೇಳಿಕೆಗಳು ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿವೆ. ಇವರಿಬ್ಬರ ವಿರುದ್ಧ ಎಚ್.ವೈ. ಕಾಶಪ್ಪನವರ್ ಅವರು ಇಳಕಲ್ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇವರು ಜೀವನದಲ್ಲಿ ಕಾಮಿಡಿಯನ್ಸ್. ಇವರೆಲ್ಲ ಸ್ವಯಂ ಘೋಷಿತ ನಾಯಕರು. ಐದು ಪೈಸೆ ವೋಟ್ ಸಹ ಇವರಿಗೆ ಬೀಳುವುದಿಲ್ಲ. ಸುಮ್ಮನೆ ಸಿನಿಮಾದಲ್ಲಿ ಕಾಮಿಡಿಯನ್ ಇರುವಂತೆ, ಇವರು ಜೋಕರ್ಗಳು,” ಎಂದು ಕಾಶಪ್ಪನವರ್ ಹರಿಹಾಯ್ದಿದ್ದಾರೆ. ಕಾಶಪ್ಪನವರ್ ಅವರು ಯತ್ನಾಳ್ ಅವರ ನಡೆ-ನುಡಿಗಳನ್ನು “ಹಿಂದೂ… ಹಿಂದೂ… ನಾನೇ ಹುಲಿ… ನಾನೇ ಹುಲಿ…” ಎಂದು ನಟನೆ ಮಾಡುವ ಮೂಲಕ ಹಿಯಾಳಿಸಿದರು. “ಇವರು ಸ್ವಯಂ ಘೋಷಿತ ಹುಲಿ, ಇವರಿಗೆ ಯಾರು ಘೋಷಣೆ ಮಾಡುತ್ತಾರೆ? ತಾವೇ ಘೋಷಣೆ ಮಾಡಿಕೊಳ್ಳಬೇಕು,”ಈಶ್ವರಪ್ಪ, ಯತ್ನಾಳ್ ಮತ್ತು ಕನ್ನೇರಿ ಸ್ವಾಮಿಗಳು ಸೇರಿದಂತೆ ಈ “ನಾಲ್ಕೈದು ಜನ” ರಾಜಕೀಯದಲ್ಲಿ ಕೇವಲ “ಜೋಕರ್ಗಳು” ಎಂದು ಕಾಶಪ್ಪನವರ್ ಜರೆದರು. ಇವರು ಬಾಯಿ ತೃಪ್ತಿಗಾಗಿ, ಮನಸ್ಸಿನ ತೃಪ್ತಿಗಾಗಿ ಮಾತಾಡಿ ತಮ್ಮ ತೀಟೆ ತಿರಿಸಿಕೊಳ್ಳುವವರು ಅಷ್ಟೇ,” ಎಂದು ಸಮಾಜದಲ್ಲಿ ಇವರ ಹೇಳಿಕೆಗಳಿಗೆ ಮಹತ್ವವಿಲ್ಲ ಎಂಬುದನ್ನು ಕಾಶಪ್ಪನವರ್ ಹರಿಹಾಯ್ದರು.

