BELAGAVI

ವಿಜ್ಞಾನ ಮತ್ತು ಸಂಸ್ಕೃತಿ ಯೂ ವಿದ್ಯಾರ್ಥಿಗಳಲ್ಲಿ ಕುತೂಹಲ, ಜವಾಬ್ದಾರಿ ಮತ್ತು ಪರಸ್ಪರ ಸಹಕಾರದ ಗುಣಗಳನ್ನು ಬೆಳೆಸುತ್ತದೆ; ಡಾ.ಸೂಬರ್ನಾ ರಾಯ್

Share

ವಿಜ್ಞಾನ ಮತ್ತು ಸಂಸ್ಕೃತಿ ಯೂ ವಿದ್ಯಾರ್ಥಿಗಳಲ್ಲಿ ಕುತೂಹಲ, ಜವಾಬ್ದಾರಿ ಮತ್ತು ಪರಸ್ಪರ ಸಹಕಾರದ ಗುಣಗಳನ್ನು ಬೆಳೆಸುತ್ತದೆ ಎಂದು ಡಾಕ್ಟರ್
ಸೂಬರ್ನಾ ರಾಯ್ ಅಭಿಪ್ರಾಯಪಟ್ಟರು.

ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆರ್ ಎಲ್ ಎಸ್ ಫೇಸ್ಟಾ 2025 ಅಂತರ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಸುಬರ್ನಾ ರಾಯ್ (roy) ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಮಹಾಂತೇಶ್ ಕವಟಗಿಮಠ ಆಗಮಿಸಿದ್ದರು.
ಲಿಂಗೌಡಾ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾದ ಡಾಕ್ಟರ್ ಸುಭರ್ನಾ ರಾಯ್ ಅವರು ವಿಜ್ಞಾನ ಮತ್ತು ಸಂಸ್ಕೃತಿ ಯೂ ವಿದ್ಯಾರ್ಥಿಗಳಲ್ಲಿ ಕುತೂಹಲ, ಜವಾಬ್ದಾರಿ ಮತ್ತು ಪರಸ್ಪರ ಸಹಕಾರದ ಗುಣಗಳನ್ನು ಬೆಳೆಸುತ್ತದೆ. ವಿಜ್ಞಾನವು ಜ್ಞಾನ ಮತ್ತು ಸಂಸ್ಕೃತಿಯೂ ಕಲಿಕೆಯನ್ನು ಪ್ರತಿಬಿಂಬಿಸುತ್ತದೆ. ಉತ್ತಮ ವಿಜ್ಞಾನಿಗಳಾಗಲೂ ಇದು ಪೂರಕವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಜೆ. ಎಸ್. ಕಾವಳೆಕರ್ ಅವರು,
ಆರ್ ಎಲ್ ಎಸ್ ಫೇಸ್ಟಾ ಕೇವಲ ಒಂದು ಉತ್ಸವವಾಗಿರದೇ ಯುವಾ ಪ್ರತಿಭೆಗಳಿಗೆ ಒಂದು ವೇದಿಕೆಯಾಗಿದೆ. ಅಂತರ್ ಪದವಿ ಪೂರ್ವ ಮಹಾವಿದ್ಯಾಲಯದ ಯುವಜನತೆಯಲ್ಲಿರುವ ಜ್ಞಾನ
ಕೌಶಲ್ಯಗಳನ್ನು ಪ್ರಸ್ತುತ ಪಡಿಸಲು ಇದೊಂದು ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇನ್ನುಳಿದವರು ಉಪಸ್ಥಿತರಿದ್ದರು.

Tags:

error: Content is protected !!