ಕಳೆದ ಒಂದು ತಿಂಗಳ ಹಿಂದೆ ಹುಬ್ಬಳ್ಳಿಯ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ, ಮಹಮ್ಮದ್ ಮಲಿಕ್ ಜಾನ್ ಮೇಲೆ ಸೆಟ್ಲಿಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ರವಿ ಜಾಧವನನ್ನು ಬೆಂಡಿಗೇರಿ ಠಾಣೆ ಇನ್ಸೆಕ್ಟರ್ ಎಸ್.ಆರ್ ನಾಯ್ಕ ಅವರು ಇಂದು ಅರೆಸ್ಟ್ ಮಾಡಿದ್ದಾರೆ.

ಮಂಟೂರ ರೋಡ್ MD ದಾವೂದ್ ಮತ್ತು ಸೆಟ್ಲಿಮೆಂಟ್ ಶ್ಯಾಮ್ ಜಾಧವ ಈ ಎರಡು ಗ್ಯಾಂಗ್ ಗಳ ಮಧ್ಯೆ ಆಗಾಗ ವಾರ್ ಆಗ್ತಿತ್ತು. ಶ್ಯಾಮ್ ಜಾಧವ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಪುಡಿ ರೌಡಿಗಳು MD ದಾವೂದ್ ರೈಟ್ ಹ್ಯಾಂಡ್ ಆಗಿದ್ದ ಮಹಮ್ಮದ್ ಮಲಿಕ್ ಜಾನ್ ನನ್ನು ಒಬ್ಬಂಟಿಯಿದ್ದಾಗ ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸೆಕ್ಟರ್ ಆ್ಯಂಡ್ ಟೀಮ್ ಈಗಾಗಲೇ 15 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಕೊಲೆ ಪ್ರಕರಣದಲ್ಲಿದ್ದ ಪ್ರಮುಖ ಆರೋಪಿ ರವಿ ಜಾಧವ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಇಂದು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಸಮೀಪದ ಅಂಚಟಗೇರಿ ಊರಿನ ಹೊಲದಲ್ಲಿ ಶೆಡ್ ನಲ್ಲಿ ಬಚ್ಚಿಕೊಂಡಿದ್ದ, ರವಿ ಜಾಧವನನ್ನು ಬೆನ್ನತ್ತಿದ್ದ ಬೆಂಡಿಗೇರಿ ಪೊಲೀಸರು ಅವನನ್ನು ಇಂದು ಅರೆಸ್ಟ್ ಮಾಡಿದ್ದಾರೆ. ಮಹಮ್ಮದ್ ಮಲಿಕ್ ಜಾನ್ ಕೊಲೆ ಪ್ರಕರಣದಲ್ಲಿ ಪೊಲೀಸರು ರವಿ ಜಾಧವ ಅರೆಸ್ಟ್ ಮಾಡಿದ್ದು, ಆರೋಪಿಗಳ ಸಂಖ್ಯೆ 16 ಕ್ಕೆ ಏರಿದೆ. ಇನ್ನೂ ಈ ಕೊಲೆ ಪ್ರಕರಣದಲ್ಲಿ ಯಾರಾರು ಇದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
