ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪಲ್ಸ ಪೋಲಿಯೋ ಕಾರ್ಯಕ್ರಮಕ್ಕೆ
ತಹಶಿಲ್ದಾರ ರಾಜೇಶ ಬುರ್ಲಿ ಹಾಗೂ ಆರೋಗ್ಯ ವಿಭಾಗದ ವಿಭಾಗದ ನೋಡಲ್ ಅಧಿಕಾರಿಗಳಾದ ರಾಧಾಕೃಷ್ಣನ ಯವರು ಚಾಲನೆಯನ್ನು ನೀಡಿದರು.

ತಹಶೀಲ್ದಾರಾದ ರಾಜೇಶ ಬುರ್ಲಿ ಮಾತನಾಡಿ, ಚಿಕ್ಕೋಡಿ ಪಟ್ಟಣದ ಜನಸಂಖ್ಯೆ 48,262 ಇದರಲ್ಲಿ 0-5 ವರ್ಷದ ಮಕ್ಕಳ ಸಂಖ್ಯೆ 5,009 ಇರುತ್ತದೆ, ಈ ಎಲ್ಲ ಮಕ್ಕಳು ಕಡ್ಡಾಯವಾಗಿ ಪೋಲಿಯೋ ಲಸಿಕೆಗಳನ್ನು ಪಡೆದು ಪೋಲಿಯೋ ಮುಕ್ತ ದೇಶ ಕಟ್ಟಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಹೇಳಿದರು.
ಚಿಕ್ಕೋಡಿ ವಿಭಾಗದ ನೋಡಲ್ ಅಧಿಕಾರಿಗಳಾದ ಡಾ. ರಾಧಾಕೃಷ್ಣನ ಅವರು ಮಾತನಾಡಿ, ಭಾರತವನ್ನು 2014 ರಲ್ಲಿ ಪೋಲಿಯೊ ಮುಕ್ತವೆಂದು ಘೋಷಿಸಲಾಯಿತು, ಆದರೆ ನಾವು ಇನ್ನೂ ಕೆಲವು ಪ್ರಮುಖ ಕಾರಣಗಳಿಗಾಗಿ NID ಪಲ್ಸ್ ಪೋಲಿಯೊ ಕಾರ್ಯಕ್ರಮದ ಭಾಗವಾಗಿದ್ದೇವೆ. ನಿಯಮಿತ ಲಸಿಕೆ ಮತ್ತು ಮೇಲ್ವಿಚಾರಣೆ ಪೋಲಿಯೊವನ್ನು ದೂರವಿಡಲು ಸಹಾಯ ಮಾಡುತ್ತದೆ. ಪ್ರಯಾಣ ಮತ್ತು ವಲಸೆಯೊಂದಿಗೆ, ವೈರಸ್ ಅನ್ನು ಮತ್ತೆ ಪರಿಚಯಿಸುವ ಅಪಾಯವಿದೆ. ಮಕ್ಕಳಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಏಕಾಏಕಿ ತಡೆಯುತ್ತದೆ. ಪೋಲಿಯೊ ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನಕ್ಕೆ ಭಾರತ ಕೊಡುಗೆ ನೀಡುತ್ತದೆ. ಇದರ ಉಪಯೋಗವನ್ನು ಸಾರ್ವಜನಿಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಖನದಾಳೆ, ಶಿಶು ಅಭಿವೃದ್ಧಿ ಅಧಿಕಾರಿ ಸಂತೋಷಕುಮಾರ ಕಾಂಬಳೆ, ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಮಹೇಶ ನಾಗರಬೆಟ್ಟ, ಡಾ. ವರ್ಧಮಾನ ಬದನಿಕಾಯಿ, ಡಾ. ಅಭಿಜೀತ ಖೋಕರೆ, ಕರವೇ ಅಧ್ಯಕ್ಷರಾದ ಸಂಜು ಬಡಿಗೇರ, ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ, ಮುಖ್ಯ ಮೇಲ್ವಿಚಾರಕರು ಸೇರಿ ಸುಶೃಕಿ ಅಧಿಕಾರ ವರ್ಗದ ಸಿಬ್ಬಂದಿಯವರು ಉಪಸ್ಥಿತರಿದ್ದರು.
