ಏಡ್ಸ ರೋಗಿಗಳನ್ನು ನಮ್ಮಂತೆ ಮನುಷ್ಯರು ಸಮಾಜದಲ್ಲಿ ಗೌರವದಿಂದ ಕಂಡು ಅವರಿಗೆ ಸೂಕ್ತ ಚಿಕಿತ್ಸೆ ಕುರಿತು ಮಾಹಿತಿ ನೀಡುವದು ನಮ್ಮೇಲ್ಲರ ಕರ್ತವ್ಯ ವಾಗಿದೆ ಎಂದು ಹುಕ್ಕೇರಿ ಸಿವ್ಹಿಲ್ ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.

ಹುಕ್ಕೇರಿ ತಾಲೂಕು ಕಾನೂನು ಸೇವಾ ಸಮಿತಿ ,ವಕೀಲರ ಸಂಘ , ಸಾರ್ವಜನಿಕ ಆಸ್ಪತ್ರೆ ಹಾಗೂ ಹುಕ್ಕೇರಿ ಸರಕಾರಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಹಿರಿಯ ನ್ಯಾಯಾಧೀಶ ಆದಿತ್ಯ ಕಲಾಲ, ವಕೀಲ ಸಂಘದ ಅದ್ಯಕ್ಷ ಕೆ. ಬಿ. ಕುರಬೇಟ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಉದಯ ಕುಡಚಿ, ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ, ಸರಕಾರಿ ಅಪರ ನ್ಯಾಯವಾದಿ ಅನೀಲ ಕರೋಶಿ, ಬಿ. ಎಂ. ಜಿನರಾಳಿ, ತಾಲೂಕ ಪಂಚಾಯತ ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ವಿಠ್ಠಲ ಘಸ್ತಿ ಉಪಸ್ಥಿತರಿದ್ದರು.
ನಂತರ ಏಡ್ಸ ನಿಯಂತ್ರಣ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಹರಿಶ ಕುಮಾರ ಆರ್, ಬಿ ಎಂ ಕಳಸಪ್ಪಗೋಳ, ಮಂಜುಳಾ ಮೇಣಸೆ, ರವಿ ಪಾಟೀಲ ಇವರಿಗೆ ಸತ್ಕರಿಸಿ ಅಭಿನಂದಿಸಿದರು.
ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಮಾತನಾಡಿ ನಮ್ಮ ದೇಶ, ರಾಜ್ಯದಲ್ಲಿ ಬರುವ 2030 ನೇ ಸಾಲಿನಲ್ಲಿ ಏಡ್ಸ ನಿರ್ಮೂಲನೆ ವರ್ಷವಾಗಿ ನಮ್ಮ ರಾಜ್ಯದಲ್ಲಿ ಆಚರಿಸುವ ಗುರಿ ಹೊಂದಿ ಕಾರ್ಯಪ್ರವೃತ್ತರಾಗ ಬೇಕು ಎಂದರು .
ಏಡ್ಸ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ನಸ್ಮಾನಿತರು ಮಾತನಾಡಿ ಸರ್ಕಾರದ ಏಡ್ಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುಗಿಸಿದ ನಮ್ಮ ಕರ್ತವ್ಯವನ್ನು ಗುರುತಿಸಿ ಇಂದು ಸನ್ಮಾನ ಮಾಡಿರುವದು ನಮಗೆ ಹೆಮ್ಮೆ ಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಮಹಾದೇವಿ ಜಕಮತಿ , ನಿಜಗುಣ ಪತ್ತಾರ, ದುಂಡಪ್ಪಾ ಬೀರಗೌಡರ, ಬಸವರಾಜ ಮರಲಿಂಗಯ್ಯಾ, ಪ್ರಕಾಶ ಕೌಜಲಗಿ , ನ್ಯಾಯವಾದಿ ಪಲ್ಲೆದ ಹಾಗೂ ಆಶಾ ಕಾರ್ಯಕರ್ತರು, ಕಾಲೇಜ ವಿದ್ಯಾರ್ಥಿಗಳು ಹಾಜರಿದ್ದರು.

