ನಾರಾಯಣ್ ಬರಮನಿಗೆ ಮೇಲೆ ಸಿಎಂ ಕೈ ಎತ್ತಿದ್ರೂ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ, ಮತ್ತು ಕೆ.ಎ.ಎಸ್, ಐಪಿಎಸ್ ಅರ್ಹತೆಯ ಡಿಸಿಪಿ ಸ್ಥಾನವನ್ನು ಬರಮನಿ ಅವರಿಗೆ ನೀಡಿದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಹೇಳಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸಮಾವೇಶವೊಂದರಲ್ಲಿ ಮುಖ್ಯಮಂತ್ರಿಗಳು ಭಾಷಣದ ವೇಳೆ ಧಾರವಾಡ ಹೆಚ್ಚುವರಿ ಎಸ್ಪಿಯಾಗಿದ್ದ ನಾರಾಯಣ್ ಬರಮನಿ ಅವರ ಮೇಲೆ ಸಿಎಂ ಕೈ ಎತ್ತಿ ಗದರಿಸಿದ್ದು, ಕಾನೂನಿನ ಉಲ್ಲಂಘನೆಯಾಗಿದೆ. ಆದರೇ, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ಸರ್ಕಾರಿ ಅಧಿಕಾರಿಗಳ ಮೇಲೆ ಕೈ ಮಾಡಿದರೇ, 2 ವರ್ಷ ಕಾರಾಗೃಹ ಶಿಕ್ಷೆ, ದಂಡದ ನಿಯಮವಿದೆ. ಘಟನೆಯಿಂದ ನೊಂದಿದ್ದ ವ್ಯಕ್ತಿ ಸ್ವಯಂ ಸೇವಾ ನಿವೃತ್ತಿಗೆ ಮುಂದಾದಾಗ ಅವರು ದೂರು ನೀಡದಂತೆ ಒಲೈಸಿ, ಡಿಸಿಪಿ ಎಂದು ಬಡ್ತಿ ನೀಡಲಾಗಿದೆ. ನೇರವಾಗಿ ಐಪಿಎಸ್ ಮತ್ತು ಕೆ.ಎ.ಎಸ್ ಆದವರಿಗೆ ಮಾತ್ರ ಡಿಸಿಪಿ ಸ್ಥಾನ ನೀಡಬೇಕು. ಇದನ್ನ ಪ್ರಶ್ನಿಸಿ ಸಾರ್ವಜನಿಕ ನ್ಯಾಯಾಲಯದಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ. ಆದರೇ ನ್ಯಾಯಾಲಯವು ಅದನ್ನ ತಿರಸ್ಕರಿಸಿದೆ. ಈ ಹಿನ್ನೆಲೆ ಉಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದೆಂದು ಹೇಳಿದರು.
