ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ವಾರ್ಥ ಭಾವನೆ ಹೆಚ್ಚಿಸಿದೆ ಅದರಲ್ಲಿ ಕೇವಲ ಬಾಚಿಕೊಳ್ಳುವವರ ಸಂಖ್ಯೆ ಅಧಿಕವಿದೆ.
ಆದರೂ ಅಥಣಿಯ ಜೈನ ಸಮಾಜದ ದಾನಶೂರ ಕರ್ಣರಾದ ಮಹಾವೀರ ಪಡನಾಡ ಇವರು ಪ್ರಳಯದ 25 ವರ್ಷಗಳಿಂದ ಪ್ರತಿವರ್ಷ ಸುಮಾರು ಐವತ್ತು ಲಕ್ಷ ರೂಪಾಯಿ ಶಿಕ್ಷಣ ಸಂಸ್ಥೆಗಳಿಗೆ, ಕಡು ಬಡವರಿಗೆ ಸಹಾಯಧನ ನೀಡುತ್ತಾ ಬಂದಿದ್ದಾರೆ ಇಂದು ರವಿವಾರ ರಂದು ಶೀರಗುಪ್ಪಿ ಜ್ಞಾನಪೀಠ ಶಿಕ್ಷಣ ಸಂಸ್ಥೆಗೆ 25 ಲಕ್ಷ ಬೇನಿಗೆ ಘೋಷಣೆ ಮಾಡಿ ಸುಮಾರು 35 ಲಕ್ಷ ರೂಪಾಯಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಜೈನ ಸಮಾಜದ ಪಂಡಿತರಿಗೆ ಹಣದಾನ ವಾಗಿ ನೀಡಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಸ್ವಾರ್ಥ ಇಟ್ಟುಕೊಳ್ಳದೆ ದಾನವಾಗಿ ನೀಡುವವರು ಇನ್ನು ಇದ್ದಾರೆ. ಅದರಿಂದ ಸರಿಯಾದ ಸಮಯದಲ್ಲಿ ಮಳೆ ಬೆಳೆ ಎಲ್ಲರೂ ಕಾಣುತ್ತಿದ್ದೇವೆ ಎಂದು ಹಿರಿಯ ನ್ಯಾಯವಾದಿ ಹಾಗೂ
ಸಮಾಜ ಸೇವಕರಾದ ಅಭಯಕುಮಾರ ಅಕಿವಾಟೆ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ರವಿವಾರ ರಂದು ಕಾಗವಾಡ ತಾಲೂಕಿನ ಶೀರಗುಪ್ಪಿ ಗ್ರಾಮದ ಜ್ಞಾನಪೀಠ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೀರಗುಪ್ಪಿಯ ಜ್ಞಾನಪೀಠ ಆಂಗ್ಲ ಮಾಧ್ಯಮದ ಶಿಕ್ಷಣ ಸಂಸ್ಥೆಯ ಹಿರಿಯ ಸಮಾಜ ಸೇವಕ ದಿವಂಗತ ಶ್ರೀದತ್ತ ಕಲ್ಲಪ್ಪಾ ಶೆಟ್ಟಿ ಇವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಅವರ ಸುಪುತ್ರ
ಉದಯರಾಜ್ಯ ಶೆಟ್ಟಿ ಇವರು ಮುಂದುವರಿಸಿದ್ದಾರೆ.
ಸುಮಾರು 500 ವಿದ್ಯಾರ್ಥಿಗಳು ಓದುತ್ತಿದ್ದು ಈ ಸಂಸ್ಥೆಯ ಅಭಿವೃದ್ಧಿಗಾಗಿ
ದಾನವೀರ ಮಹಾವೀರ ಪಡನಾಡ ಇವರು 25 ಲಕ್ಷ ದೇಣಿಗೆಯಾಗಿ ನೀಡುವುದನ್ನು ಘೋಷಣೆ ಮಾಡಿ 10 ಲಕ್ಷ ರೂಪಾಯಿ ನೀಡಿದ್ದಾರೆ.
ಇದೇ ರೀತಿ ಬೆಳಗಾವಿಯ ಮಹಾವೀರ ಆಂಗ್ಲ ಮಾಧ್ಯಮ ಶಾಲೆಗೆ 11 ಲಕ್ಷ ರೂಪಾಯ ಸಂಸ್ಥೆ ಸಂಸ್ಥಾಪಕ ಮಿಥುನ ಶಾಸ್ತ್ರಿ ಇವರಿಗೆ ನೀಡಿದರು.
ಅಥಣಿಯ ವಿಜಯ ಉದ್ದಾರ ಇವರೇ ಶಿಕ್ಷಣ ಸಂಸ್ಥೆಗೆ ಒಂದು ರೂಪಾಯಿ, ಶಿರುಗುಪ್ಪಿ, ಅಂಕಲಿ, ಸಂಕುನಟ್ಟಿ, ಉಗಾರ, ಸಾಂಗ್ಲಿ ಜಿಲ್ಲೆಯ ವಾಳವಾ, ಇಲ್ಲಿಯ ಜೈನ ಸಮಾಜದ ಮಹಿಳಾ ಮಂಡಳಿಗೆ ತಲೆ ಹತ್ತು ಸಾವಿರ ರೂಪಾಯಿ, ಬೇರೆ ಬೇರೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಿಗೆ ಸಹಾಯಧನವಾಗಿ ಹಣ ನೀಡಿದರು, ಇದೇ ರೀತಿ ಸುಮಾರು 150 ಜನ ಜೈನ ಸಮಾಜದ ಪಂಡಿತರಿಗೆ ತಲಾ 15ನುರು, ದೀನಿಯವಾಗಿ ನೀಡಿದರು.
ದಾನ ವೀರ ಮಹಾವೀರ ಪಡನಾಡ ಇವರು ಮಾತನಾಡಿ ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಸುಮಾರು 50 ಲಕ್ಷ ರೂಪಾಯಿ ಶಿಕ್ಷಣ ಸಂಸ್ಥೆಗಳಿಗೆ ಕಡುಬಡವರಿಗೆ ಸಹಾಯಧನ ನೀಡುತ್ತಾ ಬಂದಿದೆ. ದಾನ ನೀಡುವುದರಿಂದ ನನ್ನ ಮನಸ್ಸಿಗೆ ತೃಪ್ತಿ ತರುತ್ತಿದೆ ಇದರಲ್ಲಿ ಯಾವುದೇ ಸ್ವಾರ್ಥ ಭಾವನೆ ನನ್ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ, ಶಿಕ್ಷಕಿರಿಗೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಬಟ್ಟೆಗಳು ಹುಡುಗರೆಯಾಗಿ ನೀಡಿದರು,
ಕಾರ್ಯಕ್ರಮದಲ್ಲಿ ಮಿಥುನ ಶಾಸ್ತ್ರಿ ಬೆಳಗಾವಿ, ಶೀತಲ್ ಮಗ್ಗೆನವರ್, ಮಾಜಂರಿ, ಅಪ್ಪ ಸಾಹೇಬ ಭೋಜೆ, ಕಲ್ಲೋಳಿ, ಅನಿಲ ಚೌಗುಲೆ, ಶಿರುಗುಪ್ಪಿ, ಜೈನ ಸಮಾಜದ ಅಧ್ಯಕ್ಷ ಮಹಾವೀರ ಕಾತ್ರಾಳೆ, ಸುನಂದಾ ನಾಂದನಿ, ಸಂಸ್ಥೆ ಅಧ್ಯಕ್ಷ ಉದಯ ಶೆಟ್ಟಿ, ಕಾರ್ಯದರ್ಶಿ ಬಿ ಎಸ್ ಶೆಟ್ಟಿ, ಮುಖ್ಯ ಗುರುಗಳಾದ ಎಸ್ ಎಸ್ ವಂಟಗುಡೆ, ಗುರುಮಾತೆ ಎಸ್ ಕೆ ಮಂಜರೆ. ಇವರು ಕಾರ್ಯಕ್ರಮ ಯಶಸ್ವಿಗೊಳಿಸಲು ವಿಶೇಷವಾಗಿ ಪ್ರಯತ್ನಿಸಿದರು.
