ರಾಜ್ಯದ ಲಜ್ಜೆಗೆಟ್ಟ ಸರ್ಕಾರಕ್ಕೆ ಜನರು ಬೇಸತ್ತಿದ್ದು, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ವೀರ ಬಾಲ್ ದಿವಸ ಹಿನ್ನೆಲೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಎಲ್ಲ ಜಾತಿ ಧರ್ಮದವರಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡಿದೆ. ಆದರೇ, ಕಳೆದ 2 ವರ್ಷದಲ್ಲಿ ಸಿಎಂ ಸಿದ್ಧರಾಮಯ್ಯ ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ಈ ಸರ್ಕಾರದಿಂದ ಸಂತೋಷವಾಗಿಲ್ಲ. ಅಧಿಕಾರಕ್ಕೆ ಬಂದ 48 ಗಂಟೆಯಲ್ಲೇ ಕಾಂಗ್ರೆಸ್ಸಿಗರ ಮುಖವಾಡ ಕಳಚಿದೆ. ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾನಿಧಿಗೆ ಕಲ್ಲು ಹಾಕಿದ್ದಾರೆ. ರಾಜ್ಯದಲ್ಲಿ ಭೀಕರ ಅತಿವೃಷ್ಠಿಯಾಗಿದೆ. ಲಜ್ಜೆಗೆಟ್ಟ ಸರ್ಕಾರ ಪರಿಹಾರ ನೀಡಿದ್ದರೂ ರೈತರ ಬಳಿ ಹೋಗಿ ಅವರ ಸಂಕಷ್ಟವನ್ನು ಕೂಡ ಕೇಳಲಿಲ್ಲ. 140 ಶಾಸಕರು ಗೆದ್ದ ಹಿನ್ನೆಲೆ ಅಧಿಕಾರದ ಮದ. ಅಧಿಕಾರದ ದರ್ಪವಿದೆ ಎಂದರು. ಇನ್ನು ಗೃಹಲಕ್ಷ್ಮೀಯ 5000 ಕೋಟಿ ಹಣ ನೀಡಿದ್ದೇವೆಂದು ಸದನಕ್ಕೆ ಮಹಿಳಾ ಸಚಿವರು ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿದರು.
