Chikkodi

ಸತೀಶ ಶುಗರ್ ಅವಾಡ್೯ನಲ್ಲಿ ಯಡೂರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Share

ಸತೀಶ ಶುಗರ ಅವಾರ್ಡನಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಚಿಕ್ಕೋಡಿ ತಾಲೂಕಿನ ಹೊಸಯಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 3 ನೇ ಸ್ಥಾನ ಪಡೆದು ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ‌.

ನಿನ್ನೆ ಸಾಯಂಕಾಲ ಚಿಕ್ಕೋಡಿ ಪಟ್ಟಣದ ಕಿವಡ್ ಮೈದಾನದಲ್ಲಿ ಸತೀಶ ಶುಗರ ಅವಾಡ್೯ನ
ಗ್ರ್ಯಾಂಡ್ ಫಿನಾಲೆಯಲ್ಲಿ ಯಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಮೂಹ ನೃತ್ಯ ಸ್ಪರ್ಧೆಯಲ್ಲಿ 3 ನೇ ಸ್ಥಾನ ತಂದು ಯಡೂರ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಅದಲ್ಲದೇ 30 ಸಾವಿರ ನಗದು ಬಹುಮಾನ ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.

ಸಂಸದೆ ಪ್ರಿಯಾಂಕಾ ಜಾರಕಿಹೊಳಿ,ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ,ಅಪ್ಪಾಸಾಹೇಬ ಕುಲಗೂಡೆ,ಕಾಂಗ್ರೇಸ ಮುಖಂಡ ಮಹಾವೀರ ಮೊಹಿತೆ,ಬುಡಾ ಅಧ್ಯಕ್ಷ ಲಕ್ಷ್ಮಣ ರಾವ ಚಿಂಗಳೆ ಸೇರಿದಂತೆ ವಿವಿಧ ಗಣ್ಯರು ಸೇರಿಕೊಂಡು ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ಎಸ್ ಡಿ ಎಮ್ ಸಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಪಾಲಕರು,ಶಿಕ್ಷಕರು ಅಭಿನಂದಿಸಿದ್ದಾರೆ.

Tags:

error: Content is protected !!