Dharwad

ರೈಲ್ವೆ ಟಿಕೆಟ್ ದರ ಹೆಚ್ಚಳ ಖಂಡಿಸಿ ಧಾರವಾಡದಲ್ಲಿ ಆಕ್ರೋಶ…

Share

ಕೇಂದ್ರ ಸರ್ಕಾರ ಇಂದಿನಿಂದ ಜಾರಿಗೆ ಬರುವಂತೆ ಸಾಮಾನ್ಯ ವರ್ಗದಿಂದ ಎಸಿ ವರ್ಗದವರೆಗಿನ ಎಲ್ಲಾ ಶ್ರೇಣಿಗಳ ರೈಲು ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಮತ್ತು ಅನಿಯಂತ್ರಿತವಾಗಿ ಹೆಚ್ಚಳ ಮಾಡಿದೆ ಎಂದು ಆರೋಪಿಸಿ, ಧಾರವಾಡದಲ್ಲಿ ಎಸ್‌ಯುಸಿಐ ಸಂಘಟನೆ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವೈ- ಧಾರವಾಡ ರೈಲ್ವೆ ನಿಲ್ದಾಣದ ಎದುರು, ಎಸ್‌ಯುಸಿಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಕೂಡಲೇ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ದರವನ್ನು ಕಡಿಮೆ ಮಾಡಬೇಕು. ರೈಲು ಸುರಕ್ಷತೆ ಮತ್ತು ಸಮಯ ಪಾಲನೆಗೆ ಅಗತ್ಯ ಕ್ರಮ ಕೈಗೊಂಡು, ಅಪಘಾತಗಳನ್ನು ತಡೆಗಟ್ಟಬೇಕು. ಸಾಮಾನ್ಯ ಹಾಗೂ ಸ್ಲೀಪರ್ ಕೋಚ್, ಬೋಗಿಗಳನ್ನು ಹೆಚ್ಚಿಸಬೇಕು, ರೈಲುಗಳಲ್ಲಿ ಶೌಚಾಲಯಗಳ ನೈರ್ಮಲ್ಯ ಮತ್ತು ಪ್ಲಾಟ್ ಫಾರ್ಮ್‌ಗಳ ಸ್ವಚ್ಛತೆ, ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳ ನೈರ್ಮಲ್ಯ ಕಾಪಾಡಬೇಕು, ಹುಬ್ಬಳ್ಳಿ – ಬೆಂಗಳೂರು ಸಾಮಾನ್ಯ ಪ್ಯಾಸೆಂಜೆತ್ ರೈಲನ್ನು ಪುನರರಾಂಭಿಸಬೇಕು, ರೈಲು ವಲಯವನ್ನು ಸಮರ್ಥವಾಗಿ ನಿರ್ವಹಿಸಲು ಅತ್ಯಗತ್ಯವಾದ ಸಿಬ್ಬಂದಿ ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Tags:

error: Content is protected !!