Vijaypura

ಒಂದೂವರೆ ವರ್ಷದ ಮಗುವಿನ ಕಳ್ಳತನ; ಪೊಲೀಸರಿಂದ ತೀವ್ರ ಹುಡುಕಾಟ

Share

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಒಂದೂವರೆ ವರ್ಷದ ಗಂಡು ಮಗುವಿನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಚಡಚಣ ಪಟ್ಟಣದ ಶಿವಾಜಿ ನಗರದ ನಿವಾಸಿ ಮೊಹಮ್ಮದ್ ಮಾಜ್ ಚಾಂದಶೇಖ್ ಎಂಬ ಮಗು ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಕಳುವಾಗಿದೆ. ಮನೆಯ ಎದುರು ಆಟವಾಡುತ್ತಿದ್ದ ಮಗುವನ್ನು ನೀಲಿ ಸೀರೆ ಧರಿಸಿದ್ದ ಅಪರಿಚಿತ ಮಹಿಳೆ ಎತ್ತಿಕೊಂಡು ಹೋಗಿದ್ದಾಳೆ ಎಂದು ಮಗುವಿನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ತಂದೆ ಚಾಂದಶೇಖ್ ತಕ್ಷಣವೇ ಚಡಚಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ಪರಿಶೀಲನೆ ಪ್ರಾರಂಭಿಸಿದ್ದಾರೆ. ಘಟನೆಯ ನಂತರ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಗೃತ ಕ್ರಮವಾಗಿ ವಿವಿಧ ರಸ್ತೆಗಳ ಮೇಲೆ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಹುಡುಕಾಟದಲ್ಲಿ ಸಾರ್ವಜನಿಕರೂ ಸಾಥ್ ನೀಡುತ್ತಿದ್ದಾರೆ. ಅಪಹರಣ ಪ್ರಕರಣದಿಂದ ಕಣ್ಣೀರಿನಲ್ಲಿ ಮುಳುಗಿರುವ ಮಗುವಿನ ಪೋಷಕರು ಮಗುವನ್ನು ಶೀಘ್ರ ಪತ್ತೆ ಹಚ್ಚುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಪೊಲೀಸರು ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲಾ ಸುಳಿವುಗಳನ್ನು ಪರಿಶೀಲಿಸುತ್ತಿದ್ದು, ಅಪರಿಚಿತ ಮಹಿಳೆಯ ಪತ್ತೆಗೆ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.

Tags:

error: Content is protected !!