State

ನರೇಗಾ ತಿದ್ದುಪಡಿ ಕಾನೂನು ರೈತರು-ಕಾರ್ಮಿಕರಿಗೆ ಮಾರಕ

Share

ಕೇಂದ್ರ ಸರ್ಕಾರ ನರೇಗಾ ಕಾನೂನನ್ನು ತಿದ್ದುಪಡಿ ಮಾಡಿ ರೈತರು ಮತ್ತು ಕಾರ್ಮಿಕರಿಗೆ ಮಾರಕವಾದ ಕಾನೂನನ್ನು ಜಾರಿಗೆ ತರುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನರೇಗಾ ಕಾನೂನನ್ನು ಬದಲಾಯಿಸಿ, ಗ್ರಾ.ಪಂ ಸದಸ್ಯರಿಗಿದ್ದ ಶಕ್ತಿ, ಕಾರ್ಮಿಕ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದ ಹಣ, ಪಂಚಾಯಿತಿ ಮಟ್ಟದ ಕೆಲಸಗಳಿಗೆ ಕೊಕ್ಕೆ ಹಾಕಿದೆ. ನಮ್ಮ ಸರ್ಕಾರವಿದ್ದಾಗ ಸ್ವಂತ ಜಾಗೆಗಳಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡರೇ, ಕೂಲಿ ನೀಡುವ ವ್ಯವಸ್ಥೆಯಿತ್ತು, ಕೂಲಿ ಕಾರ್ಮಿಕರು ಮತ್ತು ರೈತರಿಗೆ ಮಾರಕವಾದ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಈ ವಿಚಾರವನ್ನು ರಾಷ್ಟ್ರದ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದರು.

ಇನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಗೆ ಸಿಎಂ ಅವರಿಗೆ ಆಹ್ವಾನ ನೀಡಲಾಗಿದೆ. ನಮ್ಮನ್ನು ಕರೆದರೇ, ನಾವು ದೆಹಲಿಗೆ ಹೋಗುತ್ತೇವೆ ಎಂದರು. ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಸದ್ಯಕ್ಕೆ ಮಾಡುವುದು ಇಲ್ಲ. ಈಗಾಗಲೇ ಸಿಎಂ ಸಿದ್ಧರಾಮಯ್ಯ ಹಾಗೂ ತಾವು ಹೈಕಮಾಂಡ್ ಹೇಳಿದಂತೆ ನಡೆಯುತ್ತವೆಂದು ಹೇಳಿದ್ದೇವೆ. ಕಾರ್ಯಕರ್ತ ಎಂದರೇ, ನಾವು ಆಜೀವ ಸದಸ್ಯರಾಗಿ ಕೆಲಸ ಮಾಡುತ್ತೇವೆ. ನಾವು ಬಾವುಟ ಕಟ್ಟಿದ್ದೇವೆ. ಕಸವನ್ನು ಗೂಡಿಸಿದ್ದೇನೆ. ನಾನು ನೇರವಾಗಿ ವೇದಿಕೆ ಮೇಲೆ ಕುಳಿತಿಲ್ಲ ಎಂದರು.

Tags:

error: Content is protected !!