BELAGAVI

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ;

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ‘ವಿಶ್ವಮಾನವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕತೆ ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ವಿಶ್ವಮಾನವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಗಣ್ಯರು ಕರೆ ನೀಡಿದರು.

ಈ ಕುರಿತು ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಕುವೆಂಪು ಅವರ ಜನುಮ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುವೆಂಪು ಅವರ ವಿಚಾರಗಳ ಕುರಿತು ಮಾತನಾಡಿದ ಗಣ್ಯರು. ಸಮಾಜದ ದಾರ್ಶನಿಕ ವ್ಯಕ್ತಿಗಳಾಗಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಈ ಒಂದು ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವುದೇ ಒಂದು ನಮ್ಮ ದೊಡ್ಡ ಭಾಗ್ಯ ಕುವೆಂಪು ಅವರ ಬಗ್ಗೆ ನಾವು ಎಷ್ಟು ತಿಳಿದುಕೊಂಡಿದ್ದೀವೋ ಅಷ್ಟೇ ಹೆಚ್ಚಾಗಿ ನಾವು ಇನ್ನೂ ಅವರ ಬಗ್ಗೆ ತಿಳಿದುಕೊಂದಿಲ್ಲ ಎಂದರು. ಯಾರು ಬಿಎ, ಎಂ ಎ, ಪಿ.ಎಚ್.ಡಿ ಪದವಿಯನ್ನು ಪಡೆದುಕೊಳ್ಳುತ್ತಾರೋ ಅವರು ಕುವೆಂಪುರವರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರು ಸಮಾಜಕ್ಕೆ ಅಪಾರವಾದಂತಹ ಕೊಡುಗೆಯನ್ನು ನೀಡಿದ್ದಾರೆ. ಎಂದು ಹೇಳಿದರು.

ಅದೇ ರೀತಿಯಾಗಿ ಈ ಸಂದರ್ಭದಲ್ಲಿ ಮಾತನಾಡಿದ ಪ್ರೋಫೆಸರ್ ಕದ್ರೋಳ್ಳಿ ಅವರು ಈ ದೇಶದ ಗಡಿಯನ್ನು ದಾಟದೇ ವಿಶ್ವದಲ್ಲಿಯೇ ಒಬ್ಬನೇ ಒಬ್ಬ ವ್ಯಕ್ತಿ ವಿಶ್ವಮಾನವ ಎಂದು ಕರೆಯಲ್ಪಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ಕುವೆಂಪು ಅವರು ಮಾತ್ರ ಎಂದು ಹೇಳಿದರು.ಈ ಭೂ ಮಂಡಲದಲ್ಲಿ ಮನುಷ್ಯ ಜೀವಿಗಿಂತ ಇತರ ಜೀವಿಗಳಿಗೂ ಜೀವಿಸುವ ಅರ್ಹತೆಯನ್ನು ಪಡೆದುಕೊಂಡಿವೆ ಅನ್ನುವಂತಹ ವಿಚಾರ ಇದೆಯಲ್ಲ ಅದು ವಿಶ್ವಮಾನವತೆಯ ಸಂಕೇತ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಅನೇಕರು ಉಪಸ್ಥಿತರಿದ್ದರು..

Tags:

error: Content is protected !!