ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಚಿಕೋಡಿ ಜಿಲ್ಲೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಹೆಸರು ಎಂಬ ನಾಮಕರಣ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಭೀಮಾ ಮಾರ್ಗ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕರು ಸಂಜೀವ ಕಾಂಬಳೆ ಒತ್ತಾಯಿಸಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿದ ಅವರು
ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆಯಿತು ಅದೇ ರೀತಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ಮಾಡಬೇಕೆಂದು ಹೋರಾಟ ನಡೆಯುತ್ತಿದೆ.ಚಿಕ್ಕೋಡಿ ನ್ಯಾಯಾಲಯದಲ್ಲಿಅಂಬೇಡ್ಕರ್ ಅವರು ವಾದ ಮಂಡನೆ ಮಾಡಿರುತ್ತಾರೆ. ಅದೇರೀತಿಯಾಗಿ ಚಿಕ್ಕೋಡಿಯಿಂದ ಬಾಬಾಸಾಹೇಬರ ಪಕ್ಷದದಿಂದ ದತ್ತ ಕಟ್ಟಿ ಚಂಪಾ ಬಾಯಿ ಭೂಗಲೇ ಆಯ್ಕೆಯಾಗಿರುತ್ತಾರೆ. ಹೀಗಾಗಿ ಬಾಬಾ ಸಾಹೇಬರ ನೆನಪಿನಲ್ಲಿ ಚಿಕ್ಕೋಡಿ ಜಿಲ್ಲೆಗೆ ಅವರ ಹೆಸರು ಇಡಬೇಕು ಎಂದು ಅನೇಕ ಬಾರಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಮಾಡಲಾಗಿದೆ.
ಚಿಕ್ಕೋಡಿ ನೂತನ ಜಿಲ್ಲೆಗೆ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ನಗರ ಎಂದು ಹೆಸರಿಡಬೇಕು .ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಹುಬ್ಬಳ್ಳಿಯಲ್ಲಿ ನಡೆದ ಮಯ್ರಾದೆ ಹತ್ಯೆ ಖಂಡನೀಯ. ಜಾತಿ ವ್ಯವಸ್ಥೆ ವಿರುದ್ಧ ಕಠಿಣ ಕಾನೂನು ತರಬೇಕು ಎಂದರು.
ರಾಜ್ಯ ಸಮಿತಿ ಸದಸ್ಯರಾದ ಆನಂದ ಅರಬಳ್ಳಿ ಮಾತನಾಡಿ ಚಿಕ್ಕೋಡಿ ಜಿಲ್ಲೆಯಾಗಬೇಕು ಜೊತೆಗೆ ಅಂಬೇಡ್ಕರ ಎಂದು ನಾಮಕರಣ ಮಾಡಬೇಕು.
ಜಿಲ್ಲಾ ಸಂಚಾಲಕ ಪರಶುರಾಮ ಟೋನಪೆ. ರಾಜ್ಯ ಸಂಘಟನಾ ಸಂಚಾಲಕ ರೇಖಾ ಬಂಗಾರಿ ಜಿಲ್ಲಾ ಸಂಚಾಲಕ ಆರತಿ ಕಾಂಬಳೆ, ತಾಲೂಕ ಸಂಘಟನಾ ಸಂಚಾಲಕ ಹಾಗೂ ಗ್ರಾಮ ಪಂಚಾಯತ ಸದಸ್ಯ ರಾಜು ಗೌರವಗೋಳ, ನಿಪ್ಪಾಣಿ ತಾಲೂಕ ಅಧ್ಯಕ್ಷ ಸದಾಶಿವ ಕಾಂಬಳೆ ಚಿಕ್ಕೋಡಿ ತಾಲೂಕಾಧ್ಯಕ್ಷ ಈರಪ್ಪ ಸಂತವೊಳ, ಜಿಲ್ಲಾ ಸಂಘಟನಾ ಸಂಚಾಲಕ ನಿಖಿತ ಗದಾಡೆ, ಅಥಣಿ ತಾಲೂಕ ಸಂಚಾಲಕ ಪ್ರಕಾಶ ಕಾಂಬಳೆ, ಕಾಗವಾಡ ತಾಲೂಕಾ ಸಂಚಾಲಕ ರೋಹಿತ ನಾಯಕ,ಹುಕ್ಕೇರಿ ತಾಲೂಕ ಸಂಚಾಲಕಿ ಕವಿತಾ ಬೇವಿನಕಟ್ಟಿ,ವೀರಪ್ಪ ಕಾಂಬಳೆ ಅನೀಲ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
