ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಇಂದು ನಾಗಾಸಾಧುಗಳು ತೆರಳಿ ವಿಶೇಷ ಆಶೀರ್ವಾದ ಮಾಡಿದ್ದು, ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ


ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದಿಂದ ಆಗಮಿಸಿದ 10ಕ್ಕೂ ಹೆಚ್ಚು ನಾಗಾಸಾಧುಗಳು ಭೇಟಿ ನೀಡಿ ಶುಭ ಹಾರೈಸಿದರು. ಈ ಹಿಂದೆ ಕೂಡ ಡಿ.ಕೆ. ಶಿವಕುಮಾರ್ ಅವರಿಗೆ ಆಶೀರ್ವದಿಸಿದ್ದ ಈ ನಾಗಾಸಾಧುಗಳ ತಂಡ, ಈಗ ಮತ್ತೊಮ್ಮೆ ಅವರ ನಿವಾಸಕ್ಕೆ ಹುಡುಕಿ ಬಂದು ಸಿಎಂ ಆಗುವಂತೆ ಆಶೀರ್ವಾದ ಮಾಡಿದೆ. ನಿನ್ನೆಯಷ್ಟೇ ಗೋಕರ್ಣದಲ್ಲಿ ಗಣಪತಿಯ ಬಲಗಡೆ ಹೂವಿನ ಪ್ರಸಾದ ಲಭಿಸಿದ ಬೆನ್ನಲ್ಲೇ ಈ ನಾಗಾಸಾಧುಗಳ ಭೇಟಿ ಕುತೂಹಲ ಮೂಡಿಸಿದೆ. ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಡಿಕೆಶಿ, “ರಾಜಕೀಯದಲ್ಲಿ ಇರುವ ನಮಗೆ ಎಲ್ಲರ ಆಶೀರ್ವಾದವೂ ಬೇಕು, ಮನೆಗೆ ಬಂದವರನ್ನು ದೂರ ತಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

