Dharwad

ದಾರವಾಡ ವಿದ್ಯಾಗಿರಿ ಠಾಣೆ ಸಿಪಿಐ‌ನಿಂದ ಮಾದರಿ ಕಾರ್ಯ…

Share

ಯಾವುದಾದರೂ ಒಂದು ಕಳ್ಳತನ ಪ್ರಕರಣ ದಾಖಲಾದ್ರೆ ಸಾಕು, ಅದನ್ನು ಬೆನ್ನಟ್ಟಿ ಪೊಲೀಸರು ಕಳ್ಳತನವಾದ ಸಾಮಗ್ರಿಗಳ ವಶಕ್ಕೆ ಹಗಲಿರುಳು ಶ್ರಮಿಸುತ್ತಾರೆ. ಆದರೆ ಇಲ್ಲೊಬ್ಬರು ಸಿಪಿಐ ದೇವಸ್ಥಾನ ಕಲಶ ಕಳ್ಳತನವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಆ ದೇವಸ್ಥಾನಕ್ಕೆ ಠಾಣೆಯ ಸಿಬ್ಬಂದಿಯ ಸಹಕಾರದೊಂದಿಗೆ ಹೊಸ ಕಲಶವನ್ನು ದೇವಸ್ತಾನ ಕಮೀಟಿಗೆ ಹಸ್ತಾಂತರ ಮಾಡಿದ್ದಾರೆ.

ಹೌದು .. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಅಕ್ಟೋಬರ್ ತಿಂಗಳ 25 ರಂದು ಮಹಾ ಗಣಪತಿ ದೇವಸ್ಥಾನದಲ್ಲಿ ಗಣಪತಿ ಕಲಶ ಕಳ್ಳತನವಾಗಿತ್ತು. ಇ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿಯವರು ಪೊಲೀಸ್ ಠಾಣೆಗೆ ದೂರು ನೀಡಿದರು. ತನಿಖೆಗೆ ಇಳಿದ ಖಾಕಿಗೆ ಕಳ್ಳರು ಪತ್ತೆಯಾಗದ ಹಿನ್ನೆಲೆ ದೇವರಿಗೆ ಅಪಚಾರ ಆಗಬಾರದೆಂಬ ಒಳ್ಳೆಯ ಉದ್ದೇಶದಿಂದ ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಮಹ್ಮದ್ ರಫಿಕ್ ತಹಶೀಲ್ದಾರವರು ತಮ್ಮ ಸಿಬ್ಬಂದಿಯ ಸಹಕಾರದೊಂದಿಗೆ ದೇವಸ್ಥಾನಕ್ಕೆ ಹೊದೊಂದು ಕಲಶ ನೀಡಿ ಮಾದರಿಯಾಗಿ ನಿಂತಿದ್ದಾರೆ. ಬೆಳಾದ್ರೆ ಸಾಕು ಹಿಂದೂ ಮುಸ್ಲಿಂ ಎಂದು ಕಿತ್ತಾಡೋ ಸಮಾಹದಲ್ಲಿ ಇನ್ಸ್ಪೆಕ್ಟರ್ ಅವರ ಮಾದರಿಯ ಕಾರ್ಯಕ್ಕೆ ಜನ ಮೆಚ್ಚಗೆಗೆ ಪಾತ್ರವಾಗಿದೆ. ಇನ್ನೂ ಮಹಾಗಣಪತಿ ಹೊಸ ಕಲಶವನ್ನು ಠಾಣೆಯ ಇನ್ಸ್ಪೆಕ್ಟರವರು ದೇವಸ್ಥಾಮ ಕಮಿಟಿಯವರಿಗೆ ಹಸ್ತಾಂತರ ಮಾಡಿದ್ದಾರೆ.

Tags:

error: Content is protected !!