Hukkeri

ನುಡಿದಂತೆ ನಡೆದ ಎಂಎಲ್ಸಿ ಪ್ರಕಾಶ ಹುಕ್ಕೇರಿ, ಯಡೂರ ಗ್ರಾಮಸ್ಥರು ಮೆಚ್ಚುಗೆ

Share

ಕಳೆದ ವರ್ಷ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಕಲ್ಲೋಳ ಗ್ರಾಮದ ದತ್ತ ಜಯಂತಿಗೆ ಆಗಮಿಸಿದಾಗ ಮುಂದಿನ ದತ್ತ ಜಯಂತಿ ಒಳಗಾಗಿ ಕಲ್ಲೋಳ-ಯಡೂರ ಬ್ರಿಜ್ ಕಾಮಗಾರಿ ಮುಗಿಸಿ ಈ ಬ್ರಿಜ್ ನ ಮೂಲಕ ದತ್ತ ಜಯಂತಿಗೆ ಜನರು ಆಗಮಿಸುತ್ತಾರೆ ಎಂದು ಭರವಸೆಯನ್ನು ನೀಡಿದ್ದರು‌.ಆ ಭರವಸೆ ಈಡೇರಿಸಿದ್ದಾರೆ ಎಂದು ಯಡೂರ ಗ್ರಾಮಸ್ಥರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ವಿಕಾಸರತ್ನ ಎಂಬ ಬಿರುದು ಪಡೆದಿರುವ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿಯವರು ನುಡಿದಂತೆ ನಡೆದು ಮತ್ತಷ್ಟು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದೆ.ಇದಕ್ಕೆ ಉತ್ತಮ ನಿದರ್ಶದಂತೆ ಕಳೆದ ದತ್ತ ಜಯಂತಿ ಸಂದರ್ಭದಲ್ಲಿ ಕಲ್ಲೋಳ ಗ್ರಾಮದ ದತ್ತ ದೇವರ ದರ್ಶನ ಪಡೆಯಲು ಬಂದ ಸಂದರ್ಭದಲ್ಲಿ ಮುಂದಿನ ವರ್ಷದ ದತ್ತ ಜಯಂತಿಯ ಒಳಗಾಗಿ ಕಲ್ಲೋಳ-ಯಡೂರ ಬ್ರಿಜ್ ನ ಕಾಮಗಾರಿಯನ್ನು ಮುಗಿಸಿ ಈ ಬ್ರಿಜ್ ನ ಮೂಲಕ ಜನರು ದತ್ತ ಮಂದಿರದ ದರ್ಶನಕ್ಕೆ ಆಗಮಿಸುತ್ತಾರೆ ಎಂದು ಭರವಸೆಯನ್ನು ನೀಡಿದರು.ಅದರಂತೆ ಬ್ರಿಜ್ ನ ಕಾಮಗಾರಿ ಮುಗಿದಿದೆ..ನಾಳೆ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿರುವ ದತ್ತ ಮಂದಿರಕ್ಕೆ ಈ ಬ್ರಿಜ್ ನ ಮೂಲಕ ಆಗಮಿಸುತ್ತಾರೆ.ಇದೇ ಸಂದರ್ಭದಲ್ಲಿ ಸ್ಥಳೀಯರಾದ ಅಕ್ಷಯ ಸಾವಂತಯವರು ಮಾತನಾಡಿ ಎಂಎಲ್ಸಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿಯವರು ಸದಾ ಜನಪರ ಕಾಳಜಿವುಳ್ಳವರು‌.ಅವರು ನಮ್ಮ ಕ್ಷೇತ್ರಕ್ಕೆ ಜನಪ್ರತಿನಿಧಿಯಾಗಿರುವುದು ನಮ್ಮ ಭಾಗ್ಯ.ಕಳೆದ ಬಾರಿ ದತ್ತ ಜಯಂತಿ ಸಂದರ್ಭದಲ್ಲಿ ಭರವಸೆಯನ್ನು ನೀಡಿದ್ದ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಈ ದತ್ತ ಜಯಂತಿಗೆ ಈಡೇರಿಸಿದ್ದಾರೆ ಎಂದರು.

Tags:

error: Content is protected !!