Dharwad

ಮಸೀದಿ ಎದುರು ಬಂದ ಗಣೇಶನ ಮೂರ್ತಿ; ಗುಲಾಬಿ ಹೂ ನೀಡಿ ಸ್ವಾಗತಿಸಿದ ಮುಸ್ಲಿಂ ಬಾಂಧವರು

Share

ಗಣೇಶ ಹಬ್ಬ ಬಂದ್ರೆ ಸಾಕು ರಾಜ್ಯದಲ್ಲಿ ಒಂದಲ್ಲ ಒಂದು ಕಡೆ ಹಿಂದೂ ಮುಸ್ಲಿಂ ಗಲಾಟೆ ಗಲಭೆಗಳು ನಡೆಯುತ್ತಾ ಬಂದಿದ್ದು, ಆದರೆ ಧಾರವಾಡದ ಮೆಹಬೂಬ್ ನಗರದ ಮುಸ್ಲಿಂರು ಮಸೀದಿ ಬಳಿ ಬಂದ ಗಣೇಶನಿಗೆ ಹೂವಿನ ಹಾರ ಹಾಕುವ ಮೂಲಕ ನಾವೆಲ್ಲರು ಒಂದೆ ಎಂಬ ಸಂದೇಶದೊಂದಿಗೆ ಮಾದರಿಯ ಕಾರ್ಯ ಮಾಡಿದ್ದಾರೆ. ‌

ಹೌದು ಧಾರವಾಡ ಮೆಹಬೂಬ ನಗರದ ಹಿಂದೂಗಳ ಕಳೆದ ಎಂಟು ದಿನಗಳ ಹಿಂದೆ ಅದ್ದೂರಿಯಾಗಿ ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಭಾನುವಾರ ಒಂಬತ್ತು ದಿನದ ಹಿನ್ನಲೆಯಲ್ಲಿ ಗಣೇಶನ ಮೂರ್ತಿಯನ್ನು ಮೆಹಬೂನಗರದ ಮುಸ್ಲಿಂ ಸಮುದಾಯದ ಮಸೀದಿಯ ಮಾರ್ಗವಾಗಿ ಮೂರ್ತಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತಿತ್ತು. ಮಸೀದಿ ಬಳಿ ಬರುತ್ತಿದಂತೆ ಮುಸ್ಲಿಂ ಹಿರಿಯರು ಹಾಗೂ ಯುವಕರೆಲ್ಲರು ಸೇರಿ, ಗಣೇಶ ಮೂರ್ತಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಗಣೇಶ ಮಂಡಳಿಯ ಸದಸಯರಿಗೆ ಗುಲಾಬಿ ಹೂ ನೀಡುವ ಮೂಲಕ ಗಣೇಶ  ವಿಸರ್ಜನಾ ಮೆರವಣಿಗೆ ಸ್ವಾಗತಿಸಿ ಉಳಿದ ಏರಿಯಾದ ಜನತೆಗೆ ಮಾದರಿಯಾದರು. ಇನ್ನೂ ಈ ಐತಿಹಾಸಿಕ ಕ್ಷಣಗಳಲ್ಲಿ ಉಪನಗರ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಶೆಗುಣಸಿ ಸೇರಿದಂತೆಸಿಬ್ಬಂದಿಗಳು ಉಪಸ್ಥಿತರಿದ್ದರು. ಹಿಂದುಗಳ‌ ಗಣೇಶ ವಿಸರ್ಜನೆ ಮೆರವಣಿಗೆ ಮುಸ್ಲಿಂ ಹಿರಿಯರು ಇಲ್ಲಿ ಸಾಥ್ ನೀಡಿರುವುದು ವಿಶೇಷವಾಗಿತ್ತು.‌

 

Tags:

error: Content is protected !!