ಶಾಂತಿ, ಸೌಹಾರ್ದತೆಗೆ ಸಂಕೇತವಾದ ಕ್ರಿಸ್’ಮಸ್ ಹಬ್ಬವನ್ನು ಬೆಳಗಾವಿಯ ಕ್ರೈಸ್ತ ಬಾಂಧವರು ನಗರ ಮತ್ತು ಪ್ರದೇಶದ ಚರ್ಚಗಳಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಿದರು.


ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮ ಕಳೆಗಟ್ಟಿದೆ. ನಿನ್ನೆ ತಡರಾತ್ರಿಯಿಂದಲೇ ನಗರದ ಎಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.ಬೆಳಗಾವಿಯ ಮೆಥೋಡಿಸ್ಟ್ ಚರ್ಚ್. ಫಾತಿಮಾ ಕೆಥಡ್ರಲ್, ಸೇಂಟ್ ಮೇರಿ, ಸೇಂಟ್ ಅಂಥೋನಿ ಸೇರಿದಂತೆ ಬೆಳಗಾವಿ ನಗರ ಮತ್ತು ಪ್ರದೇಶದ ಚರ್ಚಗಳಲ್ಲಿ ಕ್ರಿಸ್ ಮಸ್ ಸಡಗರ ತುಸು ಜೋರಾಗಿಯೇ ಇತ್ತು. ಶಾಂತಿ, ಸೌಹಾರ್ದತೆಗೆ ಸಂಕೇತವಾಗಿ ಮಧ್ಯರಾತ್ರಿ 12ಕ್ಕೆ ಸರಿಯಾಗಿ ಪ್ರಾರ್ಥನೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಬರಮಾಡಿಕೊಂಡ್ರು. ಅಲ್ಲದೆ, ಚರ್ಚ್ನಲ್ಲಿ ಕ್ರೈಸ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಯೇಸುವಿಗೆ ನಮನ ಸಲ್ಲಿಸಿದರು.
ಚರ್ಚ್ ಆವರಣದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ ಕಳೆಗಟ್ಟಿದೆ. ಸ್ಟಾರ್, ಕ್ರಿಸ್ಮಸ್ ಟ್ರೀ, ಸಾಂತಾ ಕ್ಲಾಸ್, ಗಿಫ್ಟ್ ಬಾಕ್ಸ್, ಕಮಾನುಗಳಿಂದ ಚರ್ಚ್ ಕಂಗೊಳಿಸುತ್ತಿದೆ. ಇಲ್ಲಿಗೆ ಆಗಮಿಸಿದ್ದ ಸಾವಿರಾರು ಜನರು ಪರಸ್ಪರ ಕ್ರಿಸ್ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು.
ಸಮಸ್ತ ವಿಶ್ವಕ್ಕೆ ಏಸು ಕ್ರಿಸ್ತನು ಸುಖ ಶಾಂತಿಯನ್ನು ನೀಡಲಿ. ಜನರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿ. ಎಲ್ಲ ಕಷ್ಟಗಳನ್ನು ದೂರ ಮಾಡಲಿ. ಎಲ್ಲರೂ ಪರಸ್ಪರ ಪ್ರೀತಿ-ಅನ್ಯೋನ್ಯತೆಯೊಂದಿಗೆ ಬಾಳುವ ಬುದ್ಧಿಯನ್ನು ನೀಡಲಿ. ಎಲ್ಲ ಕೆಟ್ಟತನವನ್ನು ತೊಡದು ಹಾಕಲಿ ಎಂದು ರೆವ್ಹರೆಂಡ್ ಸಿ.ಎಸ್. ಹೂಲಗೇರಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
