Chikkodi

ಡಿಸೆಂಬರ್ 4 ರಂದು 50 ಸಾವಿರ ರೈತರನ್ನ ಸೇರಿಸಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ:ಚುನ್ನಪ್ಪ ಪೂಜೇರಿ

Share

ಕರಗಾಂವ ಹಾಗೂ ಹನುಮಾನ ಏತ ನೀರಾವರಿ ಯೋಜನೆಯನ್ನು ಶೀಘ್ರವೇ ಮಂಜೂರು ಮಾಡಿ ಕಾಮಗಾರಿಯನ್ನ ಪ್ರಾರಂಭಿಸುವಂತೆ ಆಗ್ರಹಿಸಿ ಚಿಕ್ಕೋಡಿಯಲ್ಲಿ ಡಿಸೆಂಬರ್ 4 ರಂದು 50 ಸಾವಿರ ರೈತರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ‌ಪೂಜೇರಿ ಹೇಳಿದರು.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಹುದಿನಗಳ ಬೇಡಿಕೆಯಾದ ಕರಗಾಂವ ಹಾಗೂ ಹನುಮಾನ ಏತ ನೀರಾವರಿ ಯೋಜನೆಯ ಪ್ರಾರಂಭವಾಗದೇ ಸಾಕಷ್ಟು ರೈತರಿಗೆ ನೀರಿನ ಸಮಸ್ಯೆ ತಲೆದೂರಿದೆ.ಈ ಕಾರಣಕ್ಕಾಗಿ ಕರಗಾಂವ, ಕರೋಶಿ,ನಾಗರಮುನ್ನೋಳಿ ಭಾಗದ ಶಾಲಾ,ಕಾಲೇಜುಗಳನ್ನು ರಜೆ ಘೋಷಿಸಿ ವಿದ್ಯಾರ್ಥಿಗಳು,ರೈತರು,ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲವನ್ನು ಸೂಚಿಸಬೇಕು.ಈ ಪ್ರತಿಭಟನೆ ಮನಗಂಡು ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು,ಸಂಸದರು,ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಈ ನೀರಾವರಿ ಯೋಜನೆಗಳ ಕಾಮಗಾರಿ ಪ್ರಾರಂಭಿಸುವ ಸೂಕ್ತವಾದ ಭರವಸೆ ನೀಡಬೇಕು.ಇಲ್ಲವಾದ್ರೆ ಗುರ್ಲಾಪೂರ ಕ್ರಾಸ್ ಮಾದರಿಯ ಹೋರಾಟ ಚಿಕ್ಕೋಡಿಯಲ್ಲಿ ಮಾಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದರು.

ಶಾಸಕ ದುರ್ಯೋಧನ ಐಹೊಳೆ ಈ ಭಾಗದ ಶಾಸಕರಾಗಿದ್ದೀರಿ ಆದರೆ ಯಾಕೆ ನಿಮ್ಮಿಂದ ಈ ಯೋಜನೆ ಜಾರಿ ತರಲು ಆಗುತ್ತಿಲ್ಲ, ಇದುವರೆಗೆ ಕಾಮಗಾರಿ ಮಂಜೂರಾಗಿದೆ,ಹಣ ಬಿಡುಗಡೆಯಾಗಿದೆ, ಶೀಘ್ರ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಹಲವು ವರ್ಷಗಳಿಂದ ಸುಳ್ಳನ್ನು ಹೇಳಿಕೊಂಡು ಬಂದಿದ್ದೀರಿ ಆದರೆ ಸದ್ಯ ರೈತರ ತಾಳ್ಮೆ ಕಟ್ಟೆ ಒಡೆದು ಹೋಗಿದೆ. ಸದ್ಯ ಅವರು ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಬಂದಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಯವರು ಈ ಯೋಜನೆ ಕುರಿತು ಮುತುವರ್ಜಿಯನ್ನು ವಹಿಸಿ ಶೀಘ್ರವೇ ಈ ಮಹತ್ವಾಕಾಂಕ್ಷಿಯ ಎರಡು ನೀರಾವರಿ ಯೋಜನೆಯ ಮಂಜೂರಾತಿಗಾಗಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ರಾಜು ಪವಾರ,ಮನೋಜ ಮನಗೂಳಿ,ಪ್ರಶಾಂತ ಹುಕ್ಕೇರಿ, ದುಂಡಪ್ಪ ಭೆಂಡವಾಡೆ,ಮಲ್ಲಣ್ಣ ಅಂಗಡಿ,ಕುಮಾರ ಮಾಂಜರೆ,ಬಸು ಮಾಂಜ್ರೆ,ಸಚಿನ ಕುಲಕರ್ಣಿ, ಮಾಯಪ್ಪ ಮಗದುಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!