ಡಿಸೆಂಬರ್ 16 ರಂದು ಬೆಳಗಾವಿಯ ಸುವರ್ಣ ಗಾರ್ಡನ ಪ್ರತಿಭಟನಾ ವೇದಿಕೆ 4 ರಪ್ಒಇ ರಾಜ್ಯ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೋಳ್ಳಲಾಗಿದೆ ಎಂದು ಮಹಾಸಭಾ ಅದ್ಯಕ್ಷ ಬೀಮರಾವ ಪವಾರ ಹೇಳಿದರು.
ಅವರು ಇಂದು ಸುವರ್ಣಸೌಧ ಆವರಣದಲ್ಲಿ ಇನ್ ನ್ಯೂಜ ಜೋತೆ ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಸಮಗಾರ,ಮಚಿಗಾರ ಮತ್ತು ಢೋರ ಸಮೂದಾಯಗಳು ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ವಿನಂತಿಸಿದರು ಯಾವದೇ ಪ್ರಯೋಜನೆ ಯಾಗುತ್ತಿಲ್ಲಾ ಈಗ ಬೆಳಗಾವಿ ನಗರದಲ್ಲಿ ಜರಗುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ಜರುಗಿಸಿ ಆದ್ಯತೆ ಮೇರೆಗೆ ಈಡೆರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವದು ಕಾರಣ ಸಮೂದಾಯದ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೋಳಿಸಬೇಕೆಂದು ವಿನಂತಿಸಿದರು .
ಈ ಸಂದರ್ಭದಲ್ಲಿ ರಾಜ್ಯ ಗೌರವ ಅದ್ಯಕ್ಷ ಡಾ, ಮೋಹನ ಉಳ್ಳಿಕಾಶಿ, ಕಾರ್ಯದರ್ಶಿ ಮನೋಹರ ಮಂದೋಲಿ, ಸಂಜೀವ ಲೋಕಾಪುರೆ, ಮಹಾದೇವ ಪೋಳ, ವಿಠ್ಠಲ ಪೋಳ, ಸಂತೋಷ ಹೋಂಗಲ, ಜಯಶ್ರೀ ಮಾಳಗೆ, ಲತಾ ಮಾನೆ ಉಪಸ್ಥಿತರಿದ್ದರು.

