ಇಂದು ಅಕಾಲಿಕವಾಗಿ ನಿಧನ ಹೊಂದಿದ ಬಂಡಿಗನಾಥ ಅನ್ನಧಾನೇಶ್ವರ ಶ್ರೀಗಳ ಪಾರ್ಥಿವ ಶರೀರ ಹುಕ್ಕೇರಿ ಮಾರ್ಗವಾಗಿ ಬಂಡಿಗವಾಡ ಗ್ರಾಮಕ್ಕೆ ತೇರಳುವಾಗ ಹುಕ್ಕೇರಿ ಪಟ್ಟಣದಲ್ಲಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಅನ್ನಧಾನೇಶ್ವರ ಮಹಾಸ್ವಾಮಿಗಳ ಪಾರ್ಥಿವ ಶರೀರಕ್ಕೆ ಹೂ ಅರ್ಪಿಸಿ ಅಂತಿಮ ದರ್ಶನ ಪಡೆದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಬಂಡಿಗನಾಥ ಅನ್ನಧಾನೇಶ್ವರ ಮಹಾಸ್ವಾಮಿಗಳು ಹಸಿದವರಿಗೆ ಅನ್ನ ನೀಡುವ ಮೂಲಕ ದೇವರನ್ನು ಕಂಡ ಮಹಾ ಸಾಧಕರಾಗಿದ್ದರು ಅವರ ಅಗಲಿಕೆಯಿಂದ ಅನ್ನದಾಸೋಹದ ಕೊಂಡಿ ಕಳಚಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಯರನಾಳ ಕಾಳಿಕಾ ಮಠದ ರೂವಾರಿ ಮುಕುಂದ ಮಠದ , ಹಿರೇಮಠ ಗುರುಗಳು ಸೇರಿದಂತೆ ಭಕ್ತ ಸಮೂಹ ಉಪಸ್ಥಿತರಿದ್ದರು.
