BELAGAVI

ಕರಾಟೆ ತರಬೇತುದಾರ ವಿನಾಯಕ ದಂಡಕರ ಅವರ 3 ವಿದ್ಯಾರ್ಥಿಗಳಿಗೆ ಕಪ್ಪು ಬೆಲ್ಟ್ ಪ್ರದಾನ

Share

ಬೆಳಗಾವಿಯ ಶ್ರೀ ಸೋಮನಾಥ ಮಂದಿರದ ಹಾಲ್‌ನಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಒಟ್ಟು 55 ಕಲರ್ ಬೆಲ್ಟ್ ಕರಾಟೆ ಪಟುಗಳು ಭಾಗವಹಿಸಿದ್ದರು. ಪ್ರದೀಪ ಮಾರಿಗೋಂದ್ರಾ, ಪ್ರತೀಕ್ಷಾ ಮಾರಿಗೋಂದ್ರಾ, ಮತ್ತು ವೈಷ್ಣವಿ ಹೋಣಗೆಕರ್.
ಟಾಪ್ 3 ಕಪ್ಪು ಬೆಲ್ಟಗಳನ್ನು ಪಡೆದರು. ಈ ಮೂರು ವಿದ್ಯಾರ್ಥಿಗಳು ಕಳೆದ 06 ವರ್ಷಗಳಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜ ಚೌಕ್, ಮನ್ನೂರ, ಮತ್ತು ಶ್ರೀ ಸೋಮನಾಥ ಮಂದಿರ, ತಹಶೀಲ್ದಾರ ಗಲ್ಲಿಯಲ್ಲಿನ ಕರಾಟೆ ತರಗತಿಗಳಲ್ಲಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ಕಡೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಅವರ ಈ ಕಠಿಣ ಪರಿಶ್ರಮಕ್ಕಾಗಿ, ಈ ವಿದ್ಯಾರ್ಥಿಗಳಿಗೆ ಇಂಡಿಯನ್ ಕರಾಟೆ ಕ್ಲಬ್ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಗಜೇಂದ್ರ ಕಾಕತೀಕರ್ ಅವರ ಹಸ್ತದಿಂದ ಕಪ್ಪು ಬೆಲ್ಟ್, ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಮೂರು ಕಪ್ಪು ಬೆಲ್ಟ್ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರ ವಿನಾಯಕ ದಂಡಕರ ಅವರ ತರಬೇತಿ ದೊರೆತಿದೆ.ಬಾಳು ಗೋರಲ್, ಡಾ. ಪ್ರಕಾಶ ರಾಜಗೋಳಕರ್ , ಕರ್ನಲ್ ರಾಜ್ ಶುಕ್ಲಾ , ಮಹೇಶ ಬಾಮಣೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಯಶಸ್ಸಿಗಾಗಿ ಇಂಡಿಯನ್ ಕರಾಟೆ ಕ್ಲಬ್‌ನ ಲೇಡಿ ಚೀಫ್ ಇನ್‌ಸ್ಟ್ರಕ್ಟರ್ ಹೇಮಲತಾ ಗ. ಕಾಕತೀಕರ್ ಮತ್ತು ತರಬೇತುದಾರರಾದ ಪರಶುರಾಮ ಕಾಕತಿ, ಪ್ರಭಾಕರ ಕಿಲ್ಲೇಕರ, ನಿಲೇಶ ಗುರಖಾ, ಹರೀಶ ಸೋನಾರ್, ಶ್ರೇಯಾ ಯೆಳೂರಕರ, ಸಿದ್ಧಾರ್ಥ ತಹಶೀಲ್ದಾರ, ಸಾತ್ವಿಕ ಶಾನಭಾಗ, ತೇಜಸ್ವಿನ್ ದೇಸಾಯಿ, ಧನವಿತಾ ಕುಲಾಲ, ಅಮಿಷಾ ಹೋಣಗೆಕರ, ಶ್ರೇಯಾ ಚೌಗುಲೆ, ಸಾಹಿಲ್ ಕಾಕತಿ ಭರ್ಮಾ ಪಾಖರೆ ಇನ್ನುಳಿದವರು ಉಪಸ್ಥಿತರಿದ್ದರು.

Tags:

error: Content is protected !!